ಬೆಳಗಾವಿ- ಯಡಿಯೂರಪ್ಪ ಅಸಮರ್ಥ ಸಿಎಂ ಎಂದು ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿಟಿ ರವಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಇತ್ತೀಚೆಗೆ ಸಿದ್ದರಾಮಯ್ಯ ವಿಚಿತ್ರ ವಿಚಿತ್ರವಾಗಿ ಮಾತನಾಡೋದನ್ನು ಕೇಳ್ತಿದೀವಿ, ಕಲಬರಕೆ ಬಗ್ಗೆ ಮಾತನಾಡಿದ್ರು, ನನಗನಿಸುತ್ತೆ ಅವರ ಪಕ್ಷದ ನಾಯಕತ್ವ ಕಲಬರಕೆ ಆಗಿದೆ, ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಬಗ್ಗೆ ಮಾತನಾಡಿದರು, ಗೋಹತ್ಯೆ ಸಂಬಂಧಿಸಿದಂತೆ ಮುದಿಯಾದುವೆಲ್ಲಾ ಅಂತಾ ಮಾತನಾಡಿದ್ರು, ಯಾವ ರೈತನೂ ಮುದಿಯಾದವನ್ನೆಲ್ಲಾ ಮಾರಬೇಕು ಅಂತಾ ಯೋಚಿಸಲ್ಲ, ನಮ್ಮ ದೇಶದಲ್ಲಿ ಎಲ್ಲರೂ ಭಾವನೆ ಜೊತೆ ಬದುಕ್ತಾರೆ ಎಂದು ಸಿಟಿ ರವಿ ಹೇಳಿದ್ರು
ಒಂದು ಡಿಎನ್ಎ ಕ್ರಾಸ್ ಬ್ರೀಡ್, ಇನ್ನೊಂದು ಐಡಿಯಾಲಾಜಿ ಕ್ರಾಸ್ ಬ್ರೀಡ್,ತಮ್ಮ ಸಂಸ್ಕೃತಿ, ಪರಂಪರೆ, ಹಿರಿಯರು ಬದುಕಿದ್ದ ರೀತಿ ಎಲ್ಲಾ ಮರೆತು ಹೋಗಿ ಬಿಡುತ್ತೆ, ನನಗನಿಸಿದಂತೆ ಸಿದ್ದರಾಮಯ್ಯ ಮನೆತನದವರು ಗೋಸೇವೆ ಮಾಡಿದವರು,ಗೋಹತ್ಯೆ ಸಮರ್ಥಿಸಿದವರಲ್ಲ, ಆದರೆ ಸಿದ್ದರಾಮಯ್ಯ ಗೋಹತ್ಯೆ ಸಮರ್ಥಿಸುತ್ತಿದ್ದಾರೆ. ವೈಚಾರಿಕವಾಗಿ ಯಾವುದೋ ಸ್ವಲ್ಪ ಕ್ರಾಸ್ ಆಗಿದ ಹಾಗಿದೆ.ಡಿಎನ್ಎ ಅನ್ಕೋಬೇಡಿ ನಾನು ಡಿಎನ್ಎ ಮಟ್ಟಕ್ಕೆ ಹೋಗಲ್ಲ ವೈಚಾರಿಕವಾಗಿ ಕ್ರಾಸ್ ಆದಾಗ ಮೂಲ ಸಂಸ್ಕೃತಿ ಎಡಬಿಡಂಗಿ ತರಹ ಆಗಿಬಿಡುತ್ತೆ ಅವರಿಗೆ, ಅವರ ಲೀಡರ್‌ಶಿಪ್ ಸಹ ಕ್ರಾಸ್ ಬ್ರೀಡ್, ನಮ್ಮ ದೇಶದ ಬೌಂಡರಿ ಕ್ರಾಸ್ ಮಾಡಿ ಬ್ರೀಡ್ ಆಗಿಬಿಟ್ಟಿದೆ ಎಂದು ಸಿಟಿ ರವಿ ಲೇವಡಿ ಮಾಡಿದ್ರು.
ಅದರಿಂದಾಗಿ ಅವರಿಗೆ ಕ್ರಾಸ್ ಬ್ರೀಡ್ ಬಗ್ಗೆ ಸಮರ್ಥ ಮಾಡುವ ಅನಿವಾರ್ಯತೆ ಎದುರಾಗಿದೆ. ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ರು.
ಗೋಹತ್ಯೆ ನಿಷೇಧ ಕಾಯ್ದೆ ನಾವಲ್ದೆ ಮತ್ಯಾರು ಮಾಡ್ತಾರೆ,ನಮ್ಮ ಪಕ್ಷದ ಕಮಿಟ್‌ಮೆಂಟ್‌ರೀ ಅದು ಎಂದ ಸಿ.ಟಿ.ರವಿಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ಏನೂ ಆಗಬೇಕಾಗಿಲ್ಲ,ರಾಮಮಂದಿರ ಎಲ್ಲಿ ಕಟ್ತಾರೆ ಅಂತಾ ಎಲ್ಲಾ ಮಾತಾಡೋರು,ಈಗ ರಾಮಮಂದಿರಕ್ಕೆ ಅಡಿಪಾಯ ಹಾಕಿ ಕೆಲಸ ಪ್ರಾರಂಭ ಆಯ್ತೋ ಇಲ್ವೋ
ಆರ್ಟಿಕಲ್ 370 ಎಲ್ಲಿ ತಗೀತಾರೆ ಅಂತಾ ಮಾತನಾಡಿದ್ರುಆರ್ಟಿಕಲ್ 370 ತಗೆದು ಪ್ರಜಾಪ್ರಭುತ್ವ ಮರುಸ್ಥಾಪನೆ ಮಾಡಿ ಅಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಆಗ್ತಿದೆ ಇಲ್ವೋ
ನಮ್ಮ ಪಕ್ಷ ಕೊಟ್ಟ ಮಾತಿಗೆ ತಪ್ಪಿ ನಡೆದಿಲ್ಲ, ನಡೆಯೋದೂ ಇಲ್ಲ,ಇ ಷ್ಟೆಲ್ಲಾ ಮಾಡಿದ್ದರಲ್ಲ ಕಾಮನ್ ಸಿವಿಲ್ ಕೋಡ್, ಬರ್ತ್ ಕಂಟ್ರೋಲ್ ತಂದ್ಬಿಡ್ರಿ ಅಂತಿದ್ರಲ್ಲ ಮುಂದೊಂದು ದಿನ ಕಾಮನ್ ಸಿವಿಲ್ ಕೋಡ್, ಬರ್ತ್ ಕಂಟ್ರೋಲ್ ಕಾಯ್ದೆ ಅದೂ ಬರಬಹುದು ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.