ಬೆಳಗಾವಿ- ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ನ್ಟೋರ್ ನವರು ಸೆಂಟ್ರಲ್ ಇ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕೆಂಬ ವ್ಯವಸ್ಥೆಯನ್ನ ಜಾರಿಗೆ ತರಲು ಮುಂದಾಗಿರುವುದನ್ನ ಕೈ ಬಿಡಬೇಕು ಎಂದು ವತ್ತಾಯಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗೆ ಬಂದಗೆ ಕರೆ ನೀಡಲಾಗಿದೆ.
ಕುಂದಾನಗರಿ ಬೆಳಗಾವಿಯಲ್ಲೂ ಮೆಡಿಕಲ್ ಬಂದ್ ಕರೆಗೆ ನೀಡಲಾಗಿದ್ದು ಈ ಬಂದಗೆ ಬೆಳಗಾವಿ ಔಷಧ ವ್ಯಾಪಾರ ಸಂಘಟನೆಯಿಂದ ಬಂದಗೆ ಬೆಂಬಲ ನೀಡಿದ್ದಾರೆ. ಸೋಮವಾರ ಮದ್ಯರಾತ್ರಿ ೧೨ ಘಂಟೆ ಯಿಂದ ಮಂಗಳವಾರ ಮದ್ಯರಾತ್ರಿ ೧೨ ಘಂಟೆವರೆಗೆ ಔಷಧಿ ಅಂಗಡಿಗಳು ಬಂದಾಗಲಿವೆ.
ನಗರದ ಚನ್ನಮ್ಮ ವೃತ್ತಿ ಬೋಗಾರವೇಸ್ ವೃತ್ತ, ಶನಿವಾರ ಕೂಟ್, ಸೇರಿದಂತೆ ನಗದಲ್ಲಿನ ಔಷಧ ಅಂಗಡಿಗಳು ಬಂದಾಗಿವೆ.
ಇನ್ನು ಆಸ್ಪತ್ರೆಯ ಕಟ್ಟಡ ಒಳಗೆ ಹಾಗೂ ಹೊರಗೆ ಇರುವ ಅಫೊಲೊ, ಮಡ್ ಮ್ಲಸ್ ಮತ್ತು ಜನರಿಕ್ ಔಷಧ ಅಂಗಡಿಗಳು ಮಂಗಳವಾರ ಎಂದಿನಂತೆ ಕೆಲಸ ನಿರ್ವಹಿಸುತ್ತವೆ.
ಔಷದ ಅಂಗಡಿ ಬಂದಾಗಿದ್ದರಿಂದ ಸಾರ್ವಜನಿಕರಿಗೆ ತೊಂದ್ರೆ ಉಂಟಾಗಿದೆ. ಬೆಳಗಾವಿ ಜಿಲ್ಲೆಯ ೧೮೮೦ ಮೆಡಿಕಲ್ ಶಾಪ್ ಗಳಿವೆ ಇದರಲ್ಲಿಜಿಲ್ಲೆಯ ೨೯ ಮಡ್ ಪ್ಲಸ್ ಮತ್ತು ಅಪೊಲೊ ಮೆಡಿಕಲ್ ಶಾಪ್ ಗಳಲ್ಲಿ ಔಷಧ ಲಭ್ಯವಾಗಿದೆ
ಜಿಲ್ಲಾ ಆಸ್ಪತ್ರೆಯಲ್ಲಿ ೧ ಫಾರ್ಮಸಿ ಹಾಗೂ ೧ ಜನರೆಷನ್ ಔಷಧ ಅಂಗಡಿಯಲ್ಲಿ ಔಷದ ಲಭ್ಯ ಇದ್ದು ಜನರಿಕ್ ಮಳಿಗೆಗಳಲ್ಲಿ ಈಗ ಫುಲ್ ರಶ್
ಜಿಲ್ಲೆಯ ೧೮೮೦ ಔಷಧ ಅಂಗಡಿಗಳ ಪೈಕಿ ೧೬೯೯ ಮೆಡಿಕಲ್ ಗಳು ಬಂದ್ ಗೆ ಬೆಂಬಲ ನೀಡಿವೆ