ಶಿವ..ಶಿವ..ಅಭಿಮಾನ ಅಂದ್ರೆ ಹಿಗೂ ಉಂಟೇ…!
ಬೆಳಗಾವಿ- ಚಿತ್ರ ನಟ ಮತ್ತು ನಟಿಯರ ಅನೇಕ ಅಭಿಮಾನಿಗಳು ಇರ್ತಾರೆ ಅಭಿಮಾನಿಗಳು ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ವ್ಯೆಕ್ತಪಡಿಸುತ್ತಾರೆ ಆದರೆ ಬೆಳಗಾವಿ ಸಮೀಪದ ಮಾರ್ಕಂಡೇಯ ನಗರದಲ್ಲಿ ಶಿವರಾಜಕುಮಾರ್ ಅವರ ಭಿಮಾನಿಯೊಬ್ಬ ಇದ್ದಾನೆ ಶಿವರಾಜ್ ಕುಮಾರ್ ಅಂದ್ರೆ ಶಿವ..ಅವರೇ ನನ್ನ ದೇವರು ಎಂದು ದಿನನಿತ್ಯ ಶಿವರಾಜ್ ಕಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ
ದಿನನಿತ್ಯ ಶಿವಭಜನೆ ಮಾಡುವ ಮಾರ್ಕಂಡೇಯ ನಗರದ ಫಕೀರಪ್ಪ ರಾಮಪ್ಪ ಜುಂಜಣ್ಣವರ ಶಿವರಾಜಕುಮಾರ ಅವರನ್ನು ಶಿವ ಎಂದು ನಂಬಿರುವ ಈತ ಶಿವರಾಜಕುಮಾರ್ ಹುಟ್ಟುಹಬ್ಬದ ನಿಮಿತ್ಯ ಬೆಳಗಾವಿಯಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಆರಂಭಿಸಿದ್ದಾನೆ
ಜುಲೈ ಹನ್ನೆರಡರಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬ ಹೀಗಾಗಿ ಅವರ ಅಭಿಮಾನಿ ಫಕೀರಪ್ಪ ಇಂದು ಐದು ಘಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಿಂದ ಬೆಂಗಳೂರಿಗೆ ಶಿವ ದರ್ಶನಕ್ಕಾಗಿ ಪಾದ ಯಾತ್ರೆ ಆಎಂಭಿಸಿದ್ದಾನೆ
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶಿವರಾಜಕುಮಾರ ಅಭಿಮಾನಿ ಫಕೀರಪ್ಪ ಶಿವರಾಜಕುಮಾರ ನನ್ನ ಪಾಲಿನ ಶಿವ..ಅವರೇ ನನ್ನ ದೇವರು ದಿನಮಿತ್ಯ ನಾನು ಅವರ ಪೂಜೆ ಮಾಡುತ್ತೇನೆ ಪ್ರತಿ ವರ್ಷ ನನ್ನ ದೇವರು ಶಿವರಾಜ್ ಕುಮಾರ ಹುಟ್ಟು ಹಬ್ಬವನ್ನು ಆಚರಿಸಲು ಬೆಂಗಳೂರಿಗೆ ಹೋಗುತ್ತೇನೆ ಕಳೆದ ವರ್ಷ ಸೈಕಲ್ ಮೂಲಕ ಬೆಂಗಳೂರಿಗೆ ಹೋಗಿದ್ದೆ ಈ ವರ್ಷ ಧರ್ಮಸ್ಥಳದ ಮಂಜುನಾಥ ನಲ್ಲಿ ಪಾದಯಾತ್ರೆ ಮೂಲಕ ಬೆಂಗಳೂರಿಗೆ ಹೋಗುವದಾಗಿ ಹರಕೆ ಹೊತ್ತಿರುವದಾಗಿ ಫಕೀರಪ್ಪ ತಿಳಿಸಿದ
ಫಕೀರಪ್ಪ ಶಿವರಾಜ್ ಕುಮಾರ್ ಅವರನ್ನು ದೇವರೆಂದೇ ನಂಬಿ ಅವರ ಹುಟ್ಟು ಹಬ್ಬ ಆಚರಿಸಲು ಬೆಳಗಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾನೆ
ಶಿವ..ಶಿವ..ಅಭಿಮಾನ ಅಂದ್ರೆ ಹೀಗೂ.ಉಂಟೇ…!
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ