ಬೆಳಗಾವಿ- ಬೆಳಗಾವಿ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ನಾಳೆ ಸೇವಾ ನಿವೃತ್ತಿ ಹೊಂದಲಿದ್ದು ಮುಂದಿನ ಬೆಳಗಾವಿ ಪೋಲೀಸ್ ಕಮಿಷನರ್ ಯಾರು ಎನ್ನುವ ಚರ್ಚೆ ಈಗ ನಗರದಲ್ಲಿ ನಡೆಯುತ್ತಿದೆ
ಕೃಷ್ಣಭಟ್ ಸೇವಾ ನಿವೃತ್ತಿಯ ಬಳಿಕ ಸಂದೀಪ ಪಾಟೀಲ ಬೆಳಗಾವಿ ಪೋಲೀಸ್ ಆಯುಕ್ತರಾಗಿ ಬರ್ತಾರೆ ಅನ್ನೋ ಸುದ್ಧಿ ಇತ್ತು ಆದರೆ ಅವರ ಪದೋನ್ನತಿಗೆ ಇನ್ನೂ ಒಂದು ತಿಂಗಳು ಬಾಕಿ ಇದೆ ಅಲ್ಲಿಯ ವರೆಗೆ ಐಜಿಪಿ ರಾಮಚಂದ್ರ ರಾವ್ ಅವರೇ ಬೆಳಗಾವಿ ಪೋಲೀಸ್ ಆಯುಕ್ತರ ಚಾರ್ಜ ತೆಗೆದುಕೊಳ್ಳುತ್ತಾರೆ ತಿಂಗಳ ನಂತರ ಹಲವಾರು ಐಪಿಎಸ್ ಅಧಿಕಾರಿಗಳ ಪ್ರಮೋಶನ್ ಆಗಲಿದ್ದು ಸಂದೀಪ ಪಾಟೀಲ ಅಥವಾ ಬೇರೊಬ್ಬರು ಬೆಳಗಾವಿ ಆಯುಕ್ತರಾಗುತ್ತಾರೆ ಎಂದು ಹೇಳಲಾಗುತ್ತಿದೆ
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಎನ್ ಶಿವಪ್ರಸಾದ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಎನ್ ಶಿವಪ್ರಸಾದ ಅವರ ಜೊತೆಗೆ ಡಿಸಿ ರಾಜಪ್ಪ,ಪಿ ಆರ್ ಸುರೇಶ್, ವಿಕಾಸ್ ಕುಮಾರ್ ವಿಕಾಸ್ ಅವರು ಬೆಳಗಾವಿ ಪೋಲೀಸ್ ಆಯುಕ್ತರಾಗಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ
ಬೆಳಗಾವಿ ರಾಜ್ಯದ ಅತೀ ಸೂಕ್ಷ್ಮ ಜಿಲ್ಲೆಯಾಗಿದ್ದು ಇಲ್ಲಿ ಒಬ್ಬ ಸಮರ್ಥ ಮತ್ತು ಖಡಕ್ ಅಧಿಕಾರಿಯನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ ರಾಜಕಾರಣಿಗಳ ಶಿಫಾರಸ್ಸಿಗೆ ಮನ್ನಣೆ ಕೊಡದೇ ಬೇರೊಬ್ಬ ಅಧಿಕಾರಿಯನ್ನು ನೇಮಿಸುವದು ಸರ್ಕಾರದ ನಿಲುವಾಗಿದ್ದು ಎರಡು ದಿನದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಾಗಿದೆ