ನಿರ್ಭಂಧಿತ ಆಕ್ಸಿಟಾಸಿನ್ ವಶಪಡಿಸಿಕೊಂಡ ಪೋಲೀಸರು ಓರ್ವನ ಬಂಧನ
ಬೆಳಗಾವಿ- ಬೆಳಗಾವಿ ಪೋಲೀಸರು ಕಾನೂನು ಸುವ್ಯೆಸ್ಥೆ ಕಾಪಾಡುವ ಜೊತೆಗೆ ಪ್ರಾಣಿಗಳ ಜೀವಕ್ಕೆ ಮಾರಕವಾಗಿರುವ ಆಕ್ಸಿಟಾಸಿನ್ ಔಷಧಿಯನ್ನು ಆಕ್ರಮವಾಗಿ ಮಾರಾಟ ಮಾಡುವ ಜಾಲವನ್ನು ಪತ್ತೆ ಮಾಡಿರುವ ಪೋಲೀಸರು ಓರ್ವನನ್ನು ಬಂಧಸಿ ಅಪಾರ ಪ್ರಮಾಣದ ಆಕ್ಸಿಟಾಸಿನ್ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ
ಆಕ್ಸಿಟಾಸಿನ್ ಔಷಧಿಯನ್ನು ಪ್ರಾಣಿಗಳ ಹೆರಿಗೆ ಸಮಯದಲ್ಲಿ ಹೆರಿಗೆ ಸುಲಭವಾಗಿ ಆಗಲು ಈ ಆಕ್ಸಿಟಾಸೀನ್ ಔಷಧಿಯನ್ನು ಉಪಯೋಗಿಸಲಾಗುತ್ತದೆ ಈ ಔಷಧಿಯನ್ನು ದಿನನಿತ್ಯ ಪ್ರಾಣಿಗಳಿಗೆ ನೀಡಿದರೆ ಅವುಗಳು ಸಾಮರ್ಥ್ಯಕ್ಕಿಂತ ಹೆಚ್ವು ಹಾಲು ಕೊಡುತ್ತವೆ ಗೌಳಿಗಳು ತಮ್ಮ ಆದಾಯ ಹೆಚ್ಚಸಿಕೊಳ್ಳಲು ಆಕ್ಸಿಟಾಸೀನ್ ಔಷಧಿಯನ್ಮು ಎಮ್ಮೆಗಳಿಗೆ ನೀಡುತ್ತಿರುವ ಅಪಾಯಕಾರಿ ಸಂಗತಿಯನ್ನು ಬೆಳಗಾವಿ ಪೋಲೀಸರು ಬಯಲಿಗೆಳೆದಿದ್ದಾರೆ
ಆಕ್ಸಿಟಾಸೀನ್ ಔಷಧಿಯನ್ನು ದಿನನಿತ್ಯ ಪ್ರಾಣಿಗಳಿಗೆ ನೀಡುವದರಿಂದ ಪ್ರಾಣಿಗಳ ಆಯುಷ್ಯ ಕಡಿಮೆಯಾಗುತ್ತದೆ ಬಂಜೆತನ ಬರುವದರ ಜೊತೆಗೆ ದಿನನಿತ್ಯ ಆಕ್ಸಿಟಾಸೀನ್ ಸೇವಿಸುವ ಪ್ರಾಣಿಗಳ ಗರ್ಭಕೋಶಕ್ಕೆ ಕ್ಯಾನ್ಸರ್ ಆಗುತ್ತದೆ ಎಂದು ಪಶುವೈದ್ಯಕೀಯ ತಜ್ಞರು ತಿಳಿಸಿದ್ದಾರೆ
ಆಕ್ಸಿಟಾಸೀನ್ ಔಷಧಿ ಕೊಟ್ಟು ಪಡೆದ ಹಾಲು ಸೇವನೆಯಿಂದ ರಕ್ತ ಕ್ಯಾನ್ಸರ್ ಕಾಮಾಲೆ ಸ್ತನ ಕ್ಯಾನ್ಸರ್ ದಂತಹ ಭಯಾನಕ ರೋಗಗಳು ಬರುತ್ತವೆ
ಗೌಳಿಗಳು ಮಾರುವ ಹಾಲು ಹಾಲಲ್ಲಾ ಇದು ವಿಷ. ಹೌದು ಪಾಕೇಟ್ ಹಾಲು ಸರಿ ಇರಲ್ಲಾ ಎಂದು ಜನರು ಗೌಳಿಗಳಿಂದ ಹಾಲನ್ನು ಖರಿದಿ ಮಾಡಿ ಮಕ್ಕಳಿಗೆ ಹಾಲು ಉಣಿಸುತ್ತಾರೆ. ಆದ್ರೆ ಗೌಳಿಗಳು ಆಕ್ಸಿಟಾಕ್ಸಿನ್ ಇಂಜೆಕ್ಷನ್ ಅನ್ನು ಎಮ್ಮೆ ಹಸುಗಳಿಗೆ ಕೊಟ್ಟು ಜನರಿಗೂ ವಿಷಕಾರಿ ಹಾಲು ಮಾರಾಟ ಮಾಡುವ ತಂಡವನ್ನು ಬೆಳಗಾವಿ ಡಿ.ಸಿ.ಐ ಇನ್ಸ್ಪೆಕ್ಟರ್ ಬಿ.ಆರ್ ಗಡ್ಡೆಕರ್ ಮತ್ತು ಔಷದ ನಿಯಂತ್ರಕ ದೀಪಕ್ ಗಾಯಕವಾಡ ಅವರ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿ ಗಂಗಾಧರ್ ಗೌಳಿ ಎಂಬಾತನನ್ನು ಬಂದಿಸಿ ಆತನಿಂದ ೭೨ ಸಾವಿರ ಮೌಲ್ಯದ ಆಕ್ಸಿಟಾಕ್ಸಿನ್ ಇಂಜೆಕ್ಷನದ ನೂರು ಎಂ.ಎಲ್ ದ ೨೩೦ ಬಾಟಲ್ ಗಳನ್ನು ವಶಪಡಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಡಿ.ಸಿ.ಪಿ ಸಿಮಾ ಲಾಟ್ಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜಾನುವಾರು ಹೆಚ್ಚು ಹಾಲು ನೀಡಲು ಈ ನಿಷೇಧಿತ ಔಷಧಿ ನೀಡಲಾಗುತ್ತಿದ್ದು ಸ್ವತಹ ಗೌಳಿಗಳೆ ಎಮ್ಮೆ ಹಸುವಿಗೆ ಆಕ್ಸಿಟೋಸಿನ್ ಇನಜಕ್ಷನ್ ನೀಡುತ್ತಿದ್ದರು. ಆಕ್ಸಿಟೋಸಿನ್ ಮಿಶ್ರಿತ ಹಾಲು ಸೇವಿಸಿದ್ರೆ ಮಕ್ಕಳಿಗೆ ಕ್ಯಾನ್ಸರ್ ಕಾಮಾಲೇ ಸೇರಿದಂತೆ ಅನೇಕ ರೋಗಗಳು ಬರುತ್ತವೆ ಮಹಳೆಯರಿಗೆ ಬ್ರಸ್ಟ್ ಕ್ಯಾನ್ಸರ್ ಬರುತ್ತೆ . ಈ ಹಾಲಿನಿಂದ ಹೆಣ್ಣು ಮಕ್ಕಳು ಅವಧಿ ಪೂರ್ಣ ಋತುಮತಿ ಆಗುವ ಅಪಾಯ ಸಹ ಇದ್ದು ಗೌಳಿಗಳು ದಿನಾ ಜನರಿಗೆ ಇಂತಹ ವಿಷಕಾರಿ ಹಾಲು ಉಣಿಸುತ್ತಿದ್ದರು ಎಂಬುದು ಅಪಾಯಕಾರಿ ಸಂಗತಿ.
ಆಕ್ಸಿಟೋಸಿನ್ ಇನಜಕ್ಷನ್ ಅನ್ನು ಸಲುಲಿತವಾಗಿ ಹೆರಿಗೆಗಾಗಿ ಬಳಸಲಾಗುತ್ತಿದ್ದು ಗೌಳಿಗಳು ಇದ್ದನ್ನು ಕೇಟ್ಟ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ
ಖಚಿತ ಮಾಹಿತಿ ಮೆರೆಗೆ ಸಿಸಿಬಿ ಇನ್ಸ್ಪೆಕ್ಟರ್ ಗಡ್ಡೇಕರ ಮತ್ತು ಡ್ರಗ್ಸ್ ಕಂಟ್ರೋಲ್ ಅಧಿಕಾರಿ ದೀಪಕ್ ನೇತೃತ್ವದಲ್ಲಿ ದಾಳಿನಡಿಸಿ ಆರೋಪಿಯನ್ನು ಬಂದಿಸಿ ಹೆಡೆಮುರಿ ಕಟ್ಟಿ ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.