ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಇಂದು ಐದು ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬೆಳಗಾವಿಯ ರವಿವಾರಪೇಠೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಗರ ಪೋಲೀಸ್ ಇಲಾಖೆ ನಿರ್ಧರಿಸಿದೆ .
ಬೆಳಗಾವಿಯ ಕ್ಯಾಂಪ್ ಪ್ರದೇಶದ ಮೂವರಿಗೆ,ಮಾಳ ಮಾರುತಿ ಠಾಣೆ ವ್ಯಾಪ್ತಿಯ ಓರ್ವನಿಗೆ ,ಮತ್ತು ಎಪಿ ಎಂ ಸಿ ಠಾಣೆ ವ್ಯಾಪ್ತಿಯ ಏರ್ವನಿಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ನಗರ ಪೋಲೀಸ್ ಇಲಾಖೆ ಗಂಭೀರವಾಗಿದ್ದು ನಾಳೆಯಿಂದ ಬೆಳಗಾವಿ ನಗರದಲ್ಲಿ ಖಡಕ್ ಲಾಕ್ ಔಟ್ ಮಾಡಲಿದೆ
ಅನಗತ್ಯವಾಗಿ ಸುತ್ತಾಡುವವರ,ಹಾದಿ ಬೀದಿಯಲ್ಲಿ ಗುಂಪು ಗೂಡಿ ನಿಂತು ಹರಟೆ ಹೊಡೆಯುವವರ ಮೇಲೆ ನಿಗಾ ಇಡಲು ನಗರದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ದ್ರೋಣ ಕ್ಯಾಮರಾಗಳು ಹಾರಾಡಲಿವೆ.
ಇಂದು ಶುಕ್ರವಾರ ಬೆಳಗಾವಿ ಪೋಲೀಸ್ ಅಧಿಕಾರಿಗಳು ಬೆಳಗಿನ ಜಾವದಿಂದ ಸಂಜೆಯವರೆಗೆ ಸಿಟಿ ರೌಂಡ್ಸ ಹಾಕಿದ್ರು ,ನಗರ ಪೋಲೀಸ್ ಆಯುಕ್ತರು,ಡಿಸಿಪಿ ಸೀಮಾ ಲಾಟ್ಕರ್ ಹಾಗೂ ನಗರದ ಎಲ್ಲ ಎಸಿಪಿಗಳು ನಗರದ ವಿವಿಧ ಪ್ರದೇಶಗಳ ಉಸ್ತುವಾರಿ ನೋಡಿಕೊಂಡರು ನಾಳೆಯೂ ಎಲ್ಲ ಪೋಲೀಸ್ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಫೀಲ್ಡ್ ಗೆ ಇಳಿಯಲಿದ್ದು ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸಲಿದ್ದಾರೆ.
ಬೆಳಗಾವಿಯ ನಗರ ನಿವಾಸಿಗಳಿಗೆ ಅಗತ್ಯ ವಸ್ತುಗಳ ಕುರಿತು ಯಾವುದೇ ರೀತಿಯ ತೊಂದರೆ ಆಗಸಂತೆ ಎಲ್ಲ ರೀತಿಯ ವ್ಯೆವಸ್ಥೆ ಮಾಡಲಾಗಿದೆ