ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಮನೆತನದ ಕುಡಿಗಳು ರಾಜಕಾರಣದ ಹೊಸ್ತಿಲು ಪ್ರವೇಶ ಮಾಡಿದ್ದಾರೆ ಪ್ರಭಾಕರ ಕೋರೆ ಪುತ್ರ,ಪ್ರಕಾಶ ಹುಕ್ಕೇರಿ ಪುತ್ರ,ಲಕ್ಷ್ಮಣ ಸವದಿ ಪುತ್ರ,ಫಿರೋಜ್ ಸೇಠ ಪುತ್ರ ಕತ್ತಿ ಸಹೋದರರ ಇಬ್ಬರು ಮಕ್ಕಳು ಈಗಾಗಲೇ ರಾಜಕೀಯ ರಂಗ ಪ್ರವೇಶಿಸಿದ್ದು ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ ಈಗ ರಾಜಕೀಯ ಕ್ಷೇತ್ರಕ್ಕೆ ಎಂಟ್ರೀ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ನಡೆದ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ಚುನಾವಣೆ ಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃನಾಲ ಹೆಬ್ಬಾಳಕರ ಬೆಳಗಾವಿ ನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಶಾಸಕ ಫಿರೋಜ್ ಸೇಠ ಅವರ ಪುತ್ರ ಫೈಜಾನ್ ಸೇಠ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ
ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಾರ್ತಿಕ ಪಾಟೀಲ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಜಿಲ್ಲೆಯ ಎಲ್ಲ ಬ್ಲಾಕ್ ಯುವ ಅಧ್ಯಕ್ಷರ ಚುನಾವಣೆ ನಡೆದಿದ್ದು ಗುರುವಾರ ಫಲಿತಾಂಶ ಪ್ರಕಟವಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣಿಗಳ ಮಕ್ಕಳು ಈಗಾಗಲೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಕೆಲವರು ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ವಾರೆ ಸಂಸದ ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ಶಾಸಕರಾಗಿದ್ದು ಪ್ರಭಾಕರ ಕೋರೆ ಪುತ್ರ ಅಮೀತ ಕೋರೆ ಚಿಕ್ಕೋಡಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದಾರೆ
ಲಕ್ಷ್ಮೀ ಹೆಬ್ಬಾಳಕರ ಪುತ್ರ ಸಿವ್ಹಿಲ್ ಇಂಜನೀಯರಿಂಗ್ ಪದವಿ ಪಡಡದಿದ್ದಾರೆ ಜೊತೆಗೆ ರಾಜಕೀಯ ರಂಗದಲ್ಲಿ ಬೆಳೆಯುವ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದು ಹಿರಿಯರಿಗೆ ಗೌರವ ನೀಡುವ ಅವರ ಸಂಸ್ಕೃತಿ ರಾಜಕೀಯವಾಗಿ ಬೆಳೆಯಲು ಕಾರಣವಾಗಲಿದೆ ಮೃನಾಲ ಹೆಬ್ಬಾಳಕರ ಮುನ್ನಾ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದು ಮುನ್ನಾ ಭಾಯಿ MBBS ದಂತೆ ಮುನ್ನಾಭಾಯಿ ಬನ್ನ ಗಯಾ ಮಿನಿಸ್ಟರ್ ಎನ್ನುವ ಕಾಲ ಬರಬಹುದು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ