ಬೆಳಗಾವಿ- ಬಿಜೆಪಿ ನಾಯಕರ ವಿರುದ್ದ ಬಂಡಾಯದ ಬಾವುಟ ಹಾರಿಸಿ,ಧಿಡೀರ್ ಬೆಂಗಳೂರಿಗೆ ಹಾರಿದ್ದ ಮಾಜಿ ಸಚಿವರಾದ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಇಂದು ಬೆಳಗಾವಿಗೆ ವಾಪಸ್ಸಾಗಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ,
ಸಿಎಂ ಬಸವರಾಜ ಬೊಮ್ಮಾಯಿ ಕರೆದಿದಕ್ಕೆ ನಾನನು ಬಂದಿದ್ದೇನೆ ಅವರನ್ನು ಇಂದು ಭೇಟಿ ಮಾಡುತ್ತೇನೆ
ನನಗೆ ಯಾವುದೇ ಮಾಹಿತಿ ಇಲ್ಲ,ಅವರು ಮಾತನಾಡಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಜಾತಿ ಮಧ್ಯ ತರಬೇಡಿ
ಪತ್ರಕರ್ತನ ವಿರುದ್ದ ಗರಂ ಆದ ಕೆ ಎಸ್ ಈಶ್ವರಪ್ಪ
ಜಾತಿ ತಂದರೆ ನಾನು ಬೈದು ಬಿಡುತ್ತೇನೆ.ಜನರಿಗೆ ಉತ್ತರ ಕೊಡಲು ಆಗದ ಪರಿಸ್ಥಿತಿ ಈಗಲೂ ಇದೆ
ನನ್ನ ಪರವಾಗಿ ಕ್ಲೀನ್ ಚೀಟ್ ಸಿಕ್ಕಿ ಆಗಿದೆ
ನನಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ.
ಸಿಎಂ ಬರಲು ಹೇಳಿದ್ದಾರೆ ಅವರು ಏನು ಮಾತನಾಡುತ್ತಾರೆ ನೋಡೋಣನಾನು ಇವತ್ತೇ ಸಿಎಂ ಭೇಟಿ ಮಾಡುತ್ತೇನೆ
ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಗ್ಗೆ
ನನಗೂ ಸುದ್ದಿ ಸಿಕ್ಕಿದೆಆದರೆ ಯಾವಾಗ ಏನು ಅಂತಾ ಗೊತ್ತಿಲ್ಲ.ಸಿಎಂ ಮಾತಾನಾಡಿದ ಪ್ರಕಾರ ಕೇಂದ್ರ ಪಾಸಿಟಿವ್ ಆಗಿದೆನನಗೆ ರಮೇಶ್ ಜಾರಕಿಹೋಳಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋ ಬಗ್ಗೆ ಸಕಾರಾತ್ಮಕವಾಗಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇಬ್ಬರನ್ನು ಸೇರಿಸಿಕೊಳ್ಳಬೇಕು ಅಂತಾ ಮಾತಾಡಲು ಕರೆದಿದ್ದಾರೆಖಂಡಿತಾ ನನಗೆ ನೋವಾಗಿದೆ 10 ಬಾರಿ ಅದನ್ನೇ ಹೇಳಿದ್ದೇನೆಅವರು ಏಕೆ ಕೊಡಲಿಲ್ಲ ಅಂತಾ ಗೊತ್ತಿಲ್ಲ
ಎಲ್ಲಾ ಕರೆ ಮಾಡಿ ಕೇಳುತ್ತಿದ್ದಾರೆಏಕೆ ತೆಗೆದುಕೊಂಡಿಲ್ಲ ಅಂತಾ ಕಾರಣ ಗೊತ್ತಿಲ್ಲನಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕೆಂಬ ಆಸೆ ಸಿಎಂಗೆ ಇದೆ ಎಂದು ಹೇಳಿದ್ದಾರೆ.