ಬೆಳಗಾವಿ.ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಜೊತೆ ಲಕ್ಷ್ಮೀ ಹೆಬ್ಬಾಳ್ಕರ ನಿರಂತರವಾಗಿ ಸರದಿ ಸಭೆಗಳನ್ನು ನಡೆಸಿದ್ದು ಸಭೆಯಲ್ಲಿ
ಒಂಭತ್ತು ಜನ ಬೆಂಬಲಿಗ ನಿರ್ದೇಶಕರೊಂದಿಗೆ ಚರ್ಚೆ ನಡೆಯುತ್ತಿದೆ.
ಚುನಾವಣೆ ಸಮಯಕ್ಕೆ ಸರಿಯಾಗಿ ಬ್ಯಾಂಕ್‌ಗೆ ಹೋಗಲಿರುವ ನಿರ್ದೇಶಕರು ಅಧ್ಯಕ್ಷ ಉಪಾದ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿದಲಿದ್ದಾರೆ
ಅನೇಕ ಕಾಂಗ್ರೆಸ್ ಮುಖಂಡರಿಂದ ಹೆಬ್ಬಾಳ್ಕರ್‌ಗೆ ನಿರಂತರ ಫೋನ್ ಕರೆಗಳು ಬರುತ್ತಿದ್ದು ಕಾಂಗ್ರೆಸ್ ನಾಯಕರು ಬಂಡಾಯ ಶಮನಗೊಳಿಸುವ ಕಸರತ್ತ ಮುಂದುವರೆಸಿದ್ದಾರೆ
ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಚರ್ಚಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಿದ್ದು ರಾಜಿ ಸೂತ್ರ ಕಂಡು ಹಿಡಿದಿದ್ದು ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳಕರ ಇಬ್ಬರ ವರ್ಚಸ್ಸಿಗೂ ಧಕ್ಕೆಯಾಗದ ರೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಧಾನದ ಸೂತ್ರ ಕಂಡು ಹಿಡಿದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ
ಇಬ್ಬರೂ ಸೂಚಿಸಿದ ಅಭ್ಯರ್ಥಿಗಳನ್ನು ಅಧ್ಯಕ್ಷ ಉಪಾಧ್ಯಕ್ಚ ಮಾಡದೇ ಪರ್ಯಾಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿ ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡುವಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿದ್ದು ಪಿಎಲ್ ಡಿ ಬ್ಯಾಂಕಿನ 14 ಜನ ಸದಸ್ಯರು ಸೇರಿಕೊಂಡು ಅದ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಿ ಹೆಬ್ಬಾಳಕರ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಲಹಕ್ಕೆ ಬ್ರೇಕ್ ಹಾಕಲಿದ್ದಾರೆ
ಮರಾಠಾ ಸಮಾಜದ ನಿರ್ದೇಶಕರೊಬ್ಬರು ಅದ್ಯಕ್ಷರಾಗಿ ಲಿಂಗಾಯತ ಸಮಾಜದ ನಿರ್ದೇಶಕರೊಬ್ಬರನ್ಮು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಸೂತ್ರಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ
11 ಘಂಟೆಗೆ ಬ್ಯಾಂಕಿನ 14 ಜನ ನಿರ್ದೇಶಕರು ಒಟ್ಟಿಗೆ ಬ್ಯಾಂಕಿಗೆ ಬರುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವ ಸಾಧ್ಯತೆ ಇದೆ
ಬೆಳಗಾವಿ ಪಿ ಎಲ್ ಡಿ ಬ್ಯಾಂಕು ರಾಜ್ಯದ ಗಮನ ಸೆಳೆದಿದ್ದು ಚುನಾವಣೆಯ ವರದಿ ಮಾಡಲು ರಾಜಕೀಯ ಬೆಳವಣಿಗೆಯ ಮೇಲೆ ನಿಗಾ ಇಡಲು ಮಾದ್ಯಮ ಪ್ರತಿನಿಧಿಗಳ ದಂಡೇ ಬೆಳಗಾವಿಗೆ ಆಗಮಿಸಿದೆ
ಮಹಾದ್ವಾ ರಸ್ತೆಯಲ್ಲಿರುವ. ಪಿ ಎಲ್ ಡಿ ಬ್ಯಾಂಕ ಕಚೇರಿಯ ಎದುರು ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ