ಬೆಳಗಾವಿ- ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ ಚುನಾವಣೆ ಕೊನೆಗೂ ಸುಖಾಂತ್ಯ ಕಂಡಿದೆ
ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಡುವೆ ಒಮ್ಮತ ಮೂಡಿಸುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಯಶಸ್ವಿಯಾಗಿದ್ದು ಅಂತಿಮವಾಗಿ ಅದ್ಯಕ್ಷ ಉಪಾದ್ಯಕ್ಷರನ್ನು ಅವಿರೋಧವಾಗ ಆಯ್ಕೆ ಮಾಡಲಾಗಿದೆ
ಅದ್ಯಕ್ಷರಾಗಿ ಮರಾಠಾ ಸಮುದಾಯದ ಮಹಾದೇವ ಪಾಟೀಲ,ಉಪಾದ್ಯಕ್ಷರಾಗಿ ಮುಸ್ಲಿಂ ಸಮುದಾಯದ ಬಾಪು ಜಮಾದಾರ ಆಯ್ಕೆಯಾಗಿದ್ದಾರೆ
ಚುನಾವಣೆ ಮುಗಿದ ಬಳಿಕ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳಕರಗ ಜಂಟಿ ಸುದ್ದಿಗೋಷ್ಠಿ ನಡೆಸಿ ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಅಭಿಪ್ರಾಯ ಭೇದ ಮತ್ತು ಸಂವಹನದ ಕೊರತೆಯಿಂದ ಮುಂದೂಡಲಾಗಿತ್ತು ಸಚಿವ ರಮೇಶ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರ ಜೊತೆ ಮಾತನಾಡಿ ಅತ್ಯಂತ ಸೌಹಾರ್ದತೆಯಿಂದ ಈ ವಿಷಯವನ್ನು ಬಗೆ ಹರಿಸಲಾಗಿದೆ. ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ ಖಂಡ್ರೆ ಹೇಳಿದರು
ಇದರಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಮಹಾದೇವ ಪಾಟೀಲ ಉಪಾಧ್ಯಕ್ಷರಾಗಿ ಬಾಪುಸಾಬ ಜಮಾದಾರ ಆಯ್ಕೆಯಾಗಿದ್ದಾರೆ.ಈ ಆಯ್ಕೆಗೆ ಎಲ್ಲರ ಸಹಮತವಿದೆ. ಹೀಗಾಗಿ ವರಿಷ್ಠರ ಸೂಚನೆ ಮೇರೆಗೆ ಈ ಆಯ್ಕೆ ನಡೆದಿದೆ. ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಹಾಗೂ ಸಮಸ್ಯೆ ಇಲ್ಲ ಎಂದು ಖಂಡ್ರೆ ಸ್ಪಷ್ಟಪಡಿಸಿದರು ಪಿಎಲ್.ಡಿ ಬ್ಯಾಂಕ್ ಚುನಾವಣೆ ಸಣ್ಣ ಚುನಾವಣೆ. ಸೌಹಾರ್ದತೆಯಿಂದ ಬಗೆ ಹರಿಸಲಾಗಿದೆ ಎಂದರು