ಬೆಳಗಾವಿ- ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ರಸ್ತೆಯಲ್ಲಿರುವ ಬ್ಯಾರೀಕೇಡ್ ಗಳನ್ನು ಎರಡು ದಿನದ ಹಿಂದೆ ಕೆಲವು ಕಿಡಗೇಡಿಗಳು ಕಿತ್ತು ಬೀಸಾಕಿದ ಹಿನ್ನಲೆಯಲ್ಲಿ ಇಂದು ರಾತ್ರಿ ಪೋಲೀಸರ ಬಿಗಿ ಭದ್ರತೆಯಲ್ಲಿ ರಸ್ತೆಯಲ್ಲಿ ಮತ್ತೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಕಾಂಕ್ರೀಟ್ ಹಾಕುವ ಮೂಲಕ ಬ್ಯಾರೀಕೇಡ್ ಗಳನ್ನು ಇನ್ನಷ್ಟು ಭದ್ರಗೊಳಿಸಲಾಯಿತು
ಎಸಿಪಿ ಶಂಕರ ಮಾರಿಹಾಳ ಅವರ ನೇತ್ರತ್ವದ ಪೋಲೀಸರ ತಂಡ ಬಿಗೆ ಭದ್ರತೆಯಲ್ಲಿ ಬ್ಯಾರೀಕೇಡ್ ಗಳಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ಆರಂಭಿಸಿದ ಬಳಿಕ ಸ್ಥಳಕ್ಕೆ ಧಾವಿಸಿದ ಕೆಲವು ವಕೀಲರು ಇದಕ್ಕೆ ವಿರೋಧ ವ್ಯೆಕ್ತಪಡಿಸಿದರು ಈ ಸಂಧರ್ಭದಲ್ಲಿ ವಕೀಲರು ಹಾಗು ಪೋಲೀಸ್ ಅಧಿಕಾರಿಗಳ ನಡುವೆ ವಾಕ್ ಸಮರ ನಡೆಯಿತು
ಈ ಸಂಧರ್ಭದಲ್ಲಿ ಮಾತನಾಡಿದ ಎಸಿಪಿ ಶಂಕರ ಮಾರಿಹಾಳ ಕೋರ್ಟ್ ರಸ್ತೆಯಲ್ಕಿ ಬ್ಯಾರೀಕೇಡ್ ಹಾಕಿ ರಸ್ತೆಯನ್ನು ಫುಲ್ ಪ್ಯಾಕ್ ಮಾಡಿ ಅಂಡರ್ ಪಾಸ್ ಸದ್ಭಳಕೆ ಮಾಡಿಕೊಳ್ಳುವಂತೆ ಲೋಕಾಯುಕ್ತ ಕೋರ್ಟ್ ಸೂಚನೆ ನೀಡಿದೆ ಕ್ರಮ ಕೈಗೊಂಡ ಬಳಿಕ ವರದಿ ನೀಡುವಂತೆ ಸೂಚಿಸಿದ ಹಿನ್ನಲೆಯಲ್ಲಿ ನಾವು ಕೋರ್ಟ್ ಆದೇಶ ಪಾಲನೆ ಮಾಡುತ್ತಿದ್ದೇವೆ ಇದಕ್ಕೆ ನಿಮ್ಮ ವಿರೋಧ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಎಸಿಪಿ ಮಾರಾಹಾಳ ಸ್ಪಷ್ಟಪಡಿಸಿದರು
ನಂತರ ಪೋಲೀಸ್ ಅಧಿಕಾರಿಗಳ ಬಿಗೆ ಭದ್ರತೆಯಲ್ಲಿ ಬ್ಯಾರಿಕೇಡ್ ಗಳಿಗೆ ಕಾಂಕ್ರೀಟ್ ಹಾಕುವ ಕೆಲಸ ಮುಂದುವರೆದಿದೆ
ಜಿಲ್ಲಾಧಿಕಾರಿಗಳ ಕಚೇರಿ ಎದರುಗಿನ ರಸ್ತೆ ಯಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ರಸ್ತೆ ಫುಲ್ ಪ್ಯಾಕ್ ಆಗಲಿದ್ದು ಶನಿವಾರದಿಂದ ರಸ್ತೆ ದಾಟಲು ಅಂಡರ್ ಪಾಸ್ ವೇ ಗತಿ