ಬೆಳಗಾವಿ- ಬೆಳಗಾವಿ ಎಪಿಎಂಸಿ ಪೊಲೀಸರ ಭರ್ಜರಿ ಬೇಟೆಯಾಡಿದ್ದಾರೆ
ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದ ಜಾಲ್ ಪತ್ತೆ ಮಾಡಿರುವ ಪೋಲೀಸರು ವಂಚಕರನ್ನು ಬಂಧಿಸಿದ್ದಾರೆ
ಅಸಲಿ ಬಂಗಾರ ನೀಡುವುದಾಗಿ
ಜನರಿಗೆ ಮೋಸ ಮಾಡುತ್ತಿದ್ದ ಮೂವರ ಬಂಧಿಸಲಾಗಿದ್ದು ಎಪಿಎಂಸಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು
ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ವಂಚಕರು ಪೋಲೀಸರ ಬಲೆ ಬಿದ್ದಿದ್ದಾರೆ
ಬೈಲಹೊಂಗಲ ಮೂಲದ ವಿಶಾಲ ಪಾಟೀಲ 38, ದಿಲಾವರಸಾಬ ಮುರಗಿ 33 ಹಾಗೂ ಶಿವಪ್ಪಾ ಉಪ್ಪಾರ 59 ಬಂಧಿತ ಆರೋಪಿಗಳಾಗಿದ್ದಾರೆ
ಬಂಧಿತರಿಂದ 2 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ 1 ಲಕ್ಷ 25 ಸಾವಿರ ನಗದು, 250 ಗ್ರಾಂ ನಕಲಿ ಬಂಗಾರದ ತುಂಡುಗಳು ಹಾಗೂ 5 ಮೊಬೈಲ್, 3 ಸಿಮ್ ಕಾರ್ಡ್ , ಎರಡು ಬೈಕ್ ಜಪ್ತಿ ಮಾಡಲಾಗಿದೆ
ಆರೋಪಿಗಳು ಜಿಲ್ಲೆಯಾದ್ಯಂತ ಹತ್ತಾರು ಜನರಿಗೆ ವಂಚನೆ ಮಾಡಿದ್ದಾರೆ
ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಎಪಿಎಂಸಿ ಠಾಣೆಯ ಪೋಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ