Breaking News

ಹೊಸ ಆಚರಿಸುವ ಮೊದಲು ಒಂದು ಮರ್ಡರ್ ಹೊಸ ವರ್ಷದ ಮೊದಲ ದಿನ ಇನ್ನೊಂದು ಮರ್ಡರ್ …ಇದು ಬೆಳಗಾವಿ ಪೋಲೀಸರ ರಿಪೋರ್ಟ್ ಕಾರ್ಡ್ ….!!!

ಬೆಳಗಾವಿ: ಜನ್ಮದಿನ ಆಚರಿಸಿಕೊಳ್ಳುವ ಸಂತಸದಲ್ಲಿದ್ದ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಹೊನ್ನಿಹಾಳ ಗ್ರಾಮದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಂಗಳವಾರ ಹೊಸ ವರ್ಷದ ಮೊದಲ ದಿವಸವೇ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಸುಳೇಭಾವಿ ಗ್ರಾಮದ ಬಜಾರ ಗಲ್ಲಿಯ ನಾಗೇಶ ಬಸಪ್ಪ ಮ್ಯಾಕಲ್ಯಾಗೋಳ(24) ಎಂಬ ಯುವಕನನ್ನೇ ಕೊಲೆ ಮಾಡಲಾಗಿದೆ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತನನ್ನು ತಲೆ, ಕುತ್ತಿಗೆ ಹಾಗೂ ಮೈಮೇಲೆ ಮಾರಕಾಸ್ತ್ರಗಳಿಂದ ವಾರ್ ಮಾಡಿ ಕೊಚ್ಚಿ ಹತ್ಯೆಗೈಯಲಾಗಿದೆ. ಮಾಡಲಾಗಿದೆ.

ಹೊನ್ನಿಹಾಳ ಗ್ರಾಮದ ಸಮೀಪದಲ್ಲಿ ಕಟ್ಟಡ ನಿರ್ಮಾಣ ನಡೆದಿತ್ತು. ಮಂಗಳವಾರ ಬೆಳಗ್ಗೆಯೇ ಕಟ್ಟಡ ಕೆಲಸಕ್ಕೆ ನಾಗೇಶ ಹೋಗಿದ್ದನು. ಸಂಜೆ ಗೌಂಡಿ ಕೆಲಸ ಮುಗಿಸಿ ಹೊರ ಬರುತ್ತಿದ್ದಾಗ ಇದನ್ನು ಗಮನಿಸಿದ ದುಷ್ಕರ್ಮಿಗಳು ಕಟ್ಟಡದ ಪಕ್ಕದಲ್ಲಿರುವ ಶೆಡ್‍ನಲ್ಲಿ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಹಳೆಯ ದ್ವೇಷದಿಂದ ಕೊಲೆ ಆಗಿರಬಹುದು ಎಂದು ಶಂಕಿಸಿರುವ ಪೆÇಲೀಸರು, ಯುವಕ ನಾಗೇಶ ಮಂಗಳವಾರ ಕಟ್ಟಡ ಕೆಲಸಕ್ಕೆ ಹೋದಾಗ 4-5 ಜನ ದುಷ್ಕರ್ಮಿಗಳು ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹಂತಕರನ್ನು ಹುಡುಕಲು ಮಾರೀಹಾಳ ಪೆÇಲೀಸರು ಜಾಲ ಬೀಸಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಹೊನ್ನಿಹಾಳ ಗ್ರಾಮದಲ್ಲಿ ಕೊಲೆ ನಡೆದ ಸ್ಥಳದಲ್ಲಿ ಯುವಕನ ಕೊಲೆ ಆಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಹಾಗೂ ಸಂಬಂ„ಕರ ಆಕ್ರಂದನ ಮುಗಿಲು ಮುಟ್ಟಿತ್ತು. ದ್ವೇಷದ ಹಿನ್ನೆಲೆಯಲ್ಲಿಯೇ ನಮ್ಮ ಮಗನನ್ನು ಹತ್ಯೆ ಮಾಡಲಾಗಿದೆ. ಕೂಡಲೇ ಹಂತಕರನ್ನು ಬಂ„ಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.

ಸ್ಥಳಕ್ಕೆ ಗ್ರಾಮೀಣ ಎಸಿಪಿ, ಅಪರಾಧ ವಿಭಾಗದ ಡಿಸಿಪಿ ಹಾಗೂ ಮಾರೀಹಾಳ ಠಾಣೆ ಇನ್ಸಪೆಕ್ಟರ್ ವಿಜಯಕುಮಾರ ಶಿನ್ನೂರ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿದರು. ಈ ಕುರಿತು ಮಾರೀಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *