ಬೆಳಗಾವಿ
ಅಪರಿಚಿತ ಯುವತಿಯೊಬ್ಬಳ ಚಿರಾಟದ ಸದ್ದು ಕೇಳಿ ರಕ್ಷಣೆಗೆ ಧಾವಿಸಿದ ಪೇದೆಯೊಬ್ಬ ಬಾವಿಯಲ್ಲಿ ಸಿಲುಕಿ ಇಡೀ ರಾತ್ರಿ ಅಲ್ಲಿಯೇ ಕಳೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಾಲೂಕಿನ ಕಾಕತಿ ಪೊಲೀಸ್ ಠಾಣೆಯ ಪೇದೆ ರಾಜು ಕೇರಿಮನಿ ಇದೀಗ ಪ್ರಾಣಾಪಾಯದಿಂದ ಪಾರಾದ ಪೇದೆ. ಇದೀಗ ಸತತ 15 ಗಂಟೆ ಬಾವಿಯಲ್ಲಿ ಸಿಲುಕಿದ್ದ ರಾಜು ಕೇರಿಮನಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗುತ್ತಿದೆ. ಕಳೆದ ರಾತ್ರಿ ಪೇದೆ ರಾಜು ಬೆನ್ನಾಳಿ ಗ್ರಾಮದ ಹೊರ ವಲಯ ಎನ್. ಎಚ್ 4 ಬಳಿ ಗಸ್ತು ತಿರುಗುತಿದ್ದರು. ಈ ವೇಳೆಯಲ್ಲಿ ಅಪಚಿತ ಯುವತಿಯೊಬ್ಬಳು ಬಚಾವ್ ಬಚಾವ್ ಕೂಗುವ ಸದ್ದು ಕೇಳಿದೆ. ತಕ್ಷಣ ಎಚ್ಚೆತ್ತ ಪೇದೆ ಯುವತಿ ಯಾವುದೊ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಕ್ಷಣೆಗೆ ಧಾವಿಸಿದ್ದಾನೆ. ಹೀಗೆ ಜಮೀನಿನಲ್ಲಿ ಓಡುವ ಭರದಲ್ಲಿ ಬಾವಿಯನ್ನು ಗಮಿಸಿಲ್ಲ. ಅಲ್ಲಿಯೇ ಇದ್ದ ಬಾವಿಗೆ ಬಿದ್ದ ರಾಜು 20 ಅಡಿ ಆಳದ ಬಾವಿಗೆ ಬಿದ್ದಿದ್ದು, ಇಡೀ ರಾತ್ರಿ ಕಳೆದಿದ್ದಾನೆ. ಇಂದು ಮುಂಜಾನೆ ಜಮೀನಿಗೆ ಬಂದ ಮಾಲೀಕ ಬಾವಿಯ ಕಡೆ ಬಂದಾಗ ಪೇದೆಯ ಕೂಗು ಕೇಳಿದ್ದು. ತಕ್ಷಣ ಕಾಕತಿ ಪೊಲೀಸರು, ಅಗ್ನಿ ಶಾಮಕ ಸಿಬ್ಬಂಧಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಪೇದೆಯನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಪೇದೆ ರಾಜು ತನ್ನ ಮೊಬೈಲ್ ನಲ್ಲಿ ಅಪರಿಚಿತರ ಭಾವಚಿತ್ರ ಇರುವುದಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಇದೀಗ ಪೇದೆ ರಾಜು ಮೊಬೈಲ್ ಮೆಮರಿ ಕಾರ್ಡ್ ಅನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ