Breaking News

ಸ್ವಂತ ಮಗನಿಗೆ ಆಸ್ತಿಯಲ್ಲಿ ಸಿಂಹಪಾಲು…..ಸಾಕಿದ ಮಗ ಕಂಗಾಲು….ಈ ರೋಷಾಗ್ನಿಯಲ್ಲಿ ಮೂವರ ಜೀವ ಮಣ್ಣುಪಾಲು….!!!!

ಬೆಳಗಾವಿ- ಆಸ್ತಿ ಇದ್ರೆ ಮಗ ಇರಲೇ ಬೇಕು ಎಂದು ಅಕ್ಕನ ಮಗನನ್ನು ಸಾಕಿ,ನಂತರ ಎರಡನೇಯ ಮದುವೆಯಾಗಿ,ಮೊದಲನೇಯ ಹೆಂಡತಿಯನ್ನು ಹೊರಹಾಕಿ ಸಾಕಿದ ಮಗನನ್ನೂ ಹೊರ ಹಾಕಿದ ರೋಷಾಗ್ನಿಯಲ್ಲಿ ಮೂವರ ಜೀವ ಬಸ್ಮವಾದ ಘಟನೆ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ

ಇತ್ತೀಚಿಗೆ ದೊಡ್ಡವಾಡ ಗ್ರಾಮದಲ್ಲಿ ಗಂಡ,ಹೆಂಡತಿ,ಮತ್ತು ಮಗನ ಕೊಲೆ ಪ್ರಕರಣ ನಡೆದಿತ್ತು ಈ ಕೊಲೆ ಪ್ರಕರಣವನ್ನು ಬೇಧಿಸಿರುವ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಪ್ರಕರಣದಲ್ಲಿ ಮೂವರನ್ನು ಕೊಚ್ವಿ ಕೊಲೆ ಮಾಡಿದ್ದು ಒಬ್ಬನೇ ಆದ್ರೆ ಕೊಲೆಯ ಸಂಚು ರೂಪಿಸಿದ್ದು ನಾಲ್ವರು,ಇವರನ್ನು    ಪೋಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ…

ದೊಡ್ಡವಾಡ ಕೊಲೆ ಪ್ರಕರಣದ ಸಂಪೂರ್ಣ ಕಹಾನಿ……

ದೊಡ್ಡವಾಡ ಗ್ರಾಮದ ಶಿವಾನಂದ ಅಂದಾನಶೆಟ್ಟಿ ಎಂಬಾತ ತನಗೆ ಮಕ್ಕಳಾಗಲಿಲ್ಲ ನನ್ನ ಹನ್ನೆರಡು ಎಕರೆ ಜಮೀನು ಬೇ ವಾರಸಾ ಆಗಬಾರದು ಅಂತಾ ತನ್ನ ಅಕ್ಕನ ಮಗ ಶಿವಪ್ಪನನ್ನು ಸಾಕಿ ಬೆಳೆಸಿರುತ್ತಾನೆ,ಶಿವಾನಂದ ಸಂಸಾರ ನೌಕೆ ಆನಂದಮಯಿಯಾಗಿ ಸಾಗುತ್ತದೆ

, ಅಷ್ಟರಲ್ಲಿಯೇ ಶಾಂತವ್ವ ಧಾರವಾಡದಲ್ಲಿ ತನ್ನ ಗಂಡನ ಜೊತೆ ಜಗಳಾಡಿ ದೊಡ್ಡವಾಡದಲ್ಲಿರುವ ತವರು ಮನೆಗೆ ಬರ್ತಾಳೆ, ಸ್ವಂತ ಮಕ್ಕಳಿಲ್ಲದೇ ಅಕ್ಕನ ಮಗನನ್ನು ಸಾಕುತ್ತಿದ್ದ ಶಿವಾನಂದನ ಕಣ್ಣು ಶಾಂತವ್ವನ ಮೇಲೆ ಬಿದ್ದು ಶಿವಾನಂದ -ಶಾಂತವ್ವನ ನಡುವೆ ಲವ್ವಿ ಡವ್ವಿಯಾಗಿ ಶಿವಾನಂದ ಶಾಂತವ್ವನನ್ನು ಮದುವೆ ಆಗ್ತಾನೆ

ಈ ಶಾಂತವ್ವ ಮಗಳು ವಿದ್ಯಾ ಮತ್ತು ಮಗ ವಿನೋದನನ್ನು ಕರೆದುಕೊಂಡು ,ತನ್ನ ಹಳೆಯ ಗಂಡನನ್ನು ಬಿಟ್ಟು ಧಾರವಾಡ ಬಿಟ್ಟು ದೊಡ್ಡವಾಡದಲ್ಲೇ ಸೆಟಲ್ ಆಗಿರ್ತಾಳೆ ಮಗ ವಿನೋದ ಬೆಳೆದು ನಿಂತಾಗ, ಶಿವಾನಂದ ಸಾಕಿದ ಮಗ ಶಿವಪ್ಪನನ್ನು ,ಮತ್ರು ಮೊದಲನೇಯ ಹೆಂಡತಿ ಕಸ್ತೂರಿಯನ್ನು ದೂರ ಇಡ್ತಾನೆ ,ತನಗೆ ಸೇರಿದ ಹನ್ನೆರಡು ಎಕರೆ ಜಮೀನನ್ನು ಸಾಕಿದ ಮಗ ಶಿವಪ್ಪನಿಗೆ ಕೊಡದೇ ಎಲ್ಲ ಹನ್ನೆರಡು ಎಕರೆ ಜಮೀನನ್ನು ತನ್ನ ಸ್ವಂತ ಮಗನ ಹೆಸರಿಗೆ ವರ್ಗಾಯಿಸುತ್ತಾನೆ .

ಮಕ್ಕಳಿಲ್ಲ ಅಂತಾ ನನಗೆ ಸಾಕಿ ಇಡೀ ಆಸ್ತಿಯನ್ನು ಸ್ವಂತ ಮಗ ವಿನೋದನಿಗೆ ಕೊಡ್ತೀಯಾ ಅಂತಾ ಹೇಳಿ 2017 ರಲ್ಲಿಯೇ ಜಗಳವಾಗಿರುತ್ತದೆ…

ದೊಡ್ಡವಾಡ ಗ್ರಾಮದ ಈ ಶಿವಾನಂದ ಅಂದಾನಶೆಟ್ಟಿ,ಮೊದಲನೇಯ ಹೆಂಡತಿಯನ್ನೂ ದೂರವಿಟ್ಟು,ಸಾಕಿದ ಮಗನಿಗೆ ಆಸ್ತಿಯಲ್ಲಿ ಪಾಲು ಕೊಡದೇ ಇರುವದರಿಂದ ಸಾಕಿದ ಮಗ ಶಿವಪ್ಪ ,ಶಿವಾನಂದನ ಕೆರಳಿ, ತನ್ನ ಚಿಕ್ಕಮ್ಮ,ದೊಡ್ಡಮ್ಮನ ಮಕ್ಕಳಾದ,ಗೋವಿಂದ್ ಮತ್ತು ಬಸವಂತೆಪ್ಪನ ಮತ್ತು ಮಲ್ಲಿಕಾರ್ಜುನ ಸಹಾಯ ಪಡೆದು ಸೇಡು ತೀರಿಸಿಕೊಳ್ಳಲು ಸ್ಕೇಚ್ ಹಾಕ್ತಾನೆ ..

ಆಸ್ತಿಯಲ್ಲಿ ಪಾಲು ಕೊಡದ ತನ್ನ ಸಾಕು ತಂದೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೇಚ್ ಹಾಕಿದ್ದ ಸಾಕು ಮಗ ಶಿವಪ್ಪ, ಜನೇವರಿ 19 ರಂದು ರಾತ್ರಿ ಶಿವಾನಂದನ ಮನೆಗೆ ಹೋಗಿ ಮೊದಲು ವಿನೋದನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡ್ತಾನೆ ,ಮನೆಯಲ್ಲಿ ಮಲಗಿದ್ದ ವಿನೋದನ ತಾಯಿ ಶಾಂತವ್ವನನ್ನು ಖಲ್ಲಾಸ್ ಮಾಡ್ತಾನೆ ಅದಾದ ಬಳಿಕ ತನ್ನ ಸಾಕು ತಂದೆಯ ಕಥೆ ಮುಗಿಸುತ್ತಾನೆ …..

ಸಾಕು ತಂದೆ ತನಗೆ ಆಸ್ತಿಯಲ್ಲಿ ಪಾಲು ಕೊಡದೇ ಎಲ್ಲ ಆಸ್ತಿಯನ್ನು ವಿನೋದನಿಗೆ ಬರೆದುಕೊಟ್ಟ ಎಂಬ ಕಾರಣಕ್ಕೆ ಕೆರಳಿದ ಸಾಕು ಮಗ ಶಿವಪ್ಪ ,ತನ್ನ ಸಾಕು ತಂದೆ ಶಿವಾನಂದ ,ಆತನ ಸ್ವಂತ ಮಗ ವಿನೋದ ,ಶಿವಾನಂದನ ಎರಡನೇಯ ಹೆಂಡತಿ ಶಾಂತವ್ವಳನ್ನು ಒಬ್ಬನೇ ಕೊಲೆ ಮಾಡ್ತಾನೆ ,ಶಿವಪ್ಪನಿಗೆ ಸಾಥ್ ಕೊಟ್ಟ ,ಗೋವಿಂದ ,ಮತ್ತು ಬಸವಂತೆಪ್ಪಾ ಈಗ ಜೈಲು ಪಾಲಾಗಿದ್ದಾರೆ.

ಈ ತ್ರಿವಳಿ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ಬೇಧಿಸಿದ ದೊಡ್ಡವಾಡ ಪೋಲೀಸರ ಕಾರ್ಯವನ್ನು ಎಸ್ ಪಿ ,ನಿಂಬರಗಿ ಅವರು ಪ್ರಶಂಸಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *