ಬೆಳಗಾವಿ ಸುದ್ಧಿ ಕಳಕಳಿ
ವೈರಿ ಎದುರಿಗಿದ್ದು ದೃಷ್ಟಿಗೋಚರವಾಗುತ್ತಿದ್ದರೆ ಹೋರಾಟದ ತಂತ್ರಗಳ ಮೂಲಕ ಸಮರ್ಥವಾಗಿ ಎದುರಿಸಲು ಸುಲಭ ಸಾಧ್ಯಾಗುತ್ತದೆ. ಕಣ್ಣಿಗೆ ಕಾಣದೇ ಮಾಯಾಜಾಲದ ಮೂಲಕ ಆಕ್ರಮಣ ಮಾಡಿದರೆ ಸೋಲು, ಸಾವು ಗ್ಯಾರಂಟಿ. ಇಂದು ಜಗತ್ತಿನಲ್ಲಿ ಕೊರೋನಾ ವಿರುದ್ದ ನಡೆದಿರುವ ಹೋರಾಟದ ಸಾಹಸ ಇದೇ ಮಾದರಿಯಾಗಿದೆ.
ಕಣ್ಣಿಗೆ ಕಾಣದ ಕೊರೊನಾ ಯಾರ ಮೈಯಲ್ಲಿ ಸೇರಿ ಮತ್ತೇ ಯಾರ್ಯಾರನ್ನು ಬಲಿಪಡೆದುಕೊಳ್ಳುತ್ತದೆ ಹೇಳಲಾಗುವುದಿಲ್ಲ. ಹೀಗಾಗಿ, ಈ ಮಹಾಮಾರಿಯ ವೈರಿಯಿಂದ ತಪ್ಪಿಸಿಕೊಳ್ಳುವ ಒಂದೇ ಒಂದು ತಂತ್ರ ಮನೆಯಲ್ಲಿ ಅಡಗಿ ಕುಳಿತುಕೊಳ್ಳುವುದು. ಹೀಗಿದ್ದೂ ಕೊರೊನಾ ಅಟ್ಯಾಕ್ ಮಾಡಿ ಬಡೆದೆತ್ತಿಕೊಂಡು ಹೊರಡಿರುವುದು ಎಲ್ಲರ ಎದೆಯಲ್ಲಿ ನಡಕು ಉಂಟು ಮಾಡಿದೆ.
ಮಾನವ ಕುಲದ ಬೆನ್ನಿಗೆ ಬಿದ್ದರುವ ಕೊರೊನಾ ಮಾಯಾಜಾಲದ ಮಹಾಮಾರಿಯಗೆ ಹೆದರಿ ಎಲ್ಲರೂ ಮನೆಯಲ್ಲಿ ಸೇರಿಕೊಂಡರೆ ಅದರ ವಿರುದ್ದ ನೇರವಾಗಿ ಹೋರಾಟ ಮಾಡುವವರು ವೈದ್ಯರು, ಪೊಲೀಸರು ಮತ್ತು ಪೌರ ಕಾರ್ಮಿಕರು. ಕೊರೊನಾ ಅಟ್ಯಾಕ್ ಮಾಡಿದಾಗ ಅದು ಯಾರ ಮೈಯಲ್ಲಿ ಸೇರಿಕೊಂಡಿದೆ ಎಂಬುದು ವೈದ್ಯರು ಪತ್ತೆ ಮಾಡಿ ಹೋರಾಡುತ್ತಾರೆ. ಕಣ್ಣಿಗೆ ಕಾಣುವ ಕೊರಾನು ವಿರುದ್ದ ವೈದ್ಯರ ಹೋರಾಟ ತುಂಬಾ ರಿಸ್ಕ್ ಆಗಿದ್ದು, ಎಚ್ಚರ ತಪ್ಪಿದೆ ಅವರನ್ನೇ ಆಕ್ರಮಿಸಿಕೊಳ್ಳುತ್ತದೆ. ಹೀಗಾಗಿ ವೈದ್ಯರ ಸಾಹಸ ಕಾರ್ಯಕ್ಕೆ ಸೂಕ್ತ ಸುರಕ್ಷೆ ನೀಡುವುದು ಅತ್ಯಗತ್ಯ.
ಕೊರೊನಾ ರೋಗಿ ಆಸ್ಪತ್ರೆಗೆ ಬಂದಾಗ ಮಾತ್ರ ವೈದ್ಯರು ರಿಸ್ಕ್‍ಗೆ ಒಳಗಾದರೆ ಎಲ್ಲೆದಂರೆಲ್ಲಿ ತನ್ನ ಮಾಯಾಜಾಲದ ಸೃಷ್ಟಿಸುವ ಕೊರೊನಾ ವಿರುದ್ದ ಬಯಲಲ್ಲಿದ್ದುಕೊಂಡು ಅದರ ಅಟ್ಟಹಾಸವನ್ನು ನಿಯಂತ್ರಿಸಲು ಅತ್ಯಂತ ಹೆಚ್ಚಿನ ರಿಸ್ಕ್‍ಗೆ ಒಳಗಾಗಿ ಆತಂಕದ ಮಧ್ಯ ಕಾರ್ಯ ನಿರ್ವಹಿಸುವವರು ನಮ್ಮ ಪೊಲೀಸರು ಹಾಗೂ ಬಂಧುಗಳಾದ ಪೌರ ಕಾರ್ಮಿಕರು.
ವಿಭಿನ್ನ ಮನೋವೃತ್ತಿಯ ಜನರನ್ನು ಸಂಬಾಳಿಸಿವುದು ಪೊಲೀಸರಿಗೆ ದೊಡ್ಡತಲೆ ನೋವು. ಮನವಿಗೆ ಬಗ್ಗದ, ಬಾಯಿಮಾತಿಗೆ ಬಗ್ಗದ ಮೊಂಡಜನರನ್ನು ಹತೋಟಿಯಲ್ಲಿ ತರುವಾಗ ಲಾಠಿರುಚಿ ನೀಡಿದರೆ ‘ಪೊಲೀಸರಿಂದ ಹಲ್ಲೆ’ ಎಂದು ಬಿಂಬಿಸಲಾಗುತ್ತದೆ. ದಯಮಯಾ ತೋರಿದರೆ ‘ಪೊಲೀಸ್ ಬಂದೋಬಸ್ತ ಸರಿಯಿಲ್ಲ’ ಎಂಬ ಆರೋಪಗಳನ್ನು ಎದುರಿಸುತ್ತಲೇ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ. ಎದುರಿಗೆ ಬರುವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಅವನಲ್ಲಿ ಹೊಕ್ಕಿದೆಯೋ ಇಲ್ಲವೋ ಎಂಬುದು ಅರಿವಿಗೆ ಬುರುವುದಿಲ್ಲ. ಆತನನ್ನು ಎದುರುಗೊಂಡು ಮನೆ ಹಾದಿ ಹಿಡಿಸಬೇಕಾಗುತ್ತದೆ. ಕಣ್ಣಿಗೆ ಕಾಣದ ಕೊರೊನಾವನ್ನು ಬಗಲಿಗೆ ಕಟ್ಟಿಕೊಂಡೆ ಕೆಲಸ ಮಾಡುವ ಪೊಲೀಸರಿಗೆ ಸೂಕ್ತ ರಕ್ಷಣೆ ಒದಗಿಸುವುದು ಸರ್ಕಾರದ ಆಧ್ಯ ಕರ್ತವ್ಯ.
ಗುಣಮಟ್ಟದ ಮಾಸ್ಕ, ಸ್ಯಾನಿಟೈಸ್, ಗ್ಲೋಸ್ ಸೇರಿದಂತೆ ಅಗತ್ಯ ಸುರಕ್ಷಿತ ವಸ್ತುಗಳನ್ನು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು, ಜಿಲ್ಲಾ ಆಡಳಿತ ನೀಡಬೇಕಾಗಿರುವುದು ಅಗತ್ಯ ಜವಾಬ್ದಾರಿಯಾಗಿದೆ.
ಬಹುತೇಕ ರೋಗದ ಮೂಲ ಸ್ವಚ್ಛತೆ ಕಾಪಾಡದೇ ಇರುವುದು. ನಾಗರಿಕ ಸಮಾಜದ ಎಲ್ಲ ಹೊಸನ್ನು ಶುಚಿಗೊಳಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವ. ಸಾಂಕ್ರಾಮಿಕ ರೋಗ ವ್ಯಾಪಿಸುವ ಸಂದರ್ಭದಲ್ಲಿ, ಪ್ರಸ್ತುತ ಕೊರೊನಾ ವೈರಸ್ ವ್ಯಾಪಿಸಿಕೊಂಡುರವ ಆತಂಕದ ಮಧ್ಯ ಸ್ವಚ್ಚತೆ ಕಾರ್ಯಕೈಗೊಳ್ಳುವುದು ಪೌರ ಕಾರ್ಮಿಕರಿಗೂ ಸವಾಲದ ಪ್ರಶ್ನೆಯಾಗಿದೆ. ವೈರಸ್ ಕಣಗಳೊಂದಿಗೆ ಹೊರಾಟ ನಡೆಸುವ ಪೌರ ಕಾರ್ಮಿಕರಿಗಾದರೂ ಅಗತ್ಯ ಸುರಕ್ಷತೆ ಒದಗಿಸುವುದು ಆಯಾ ಸಂಸ್ಥೆಗಳು ಹಾಗೂ ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ.
ಕೇವಲ ಕರ್ತವ್ಯದಿಂದ ಮಾತ್ರ ಇವರನ್ನು ನೋಡದೇ ಮಾವನೀಯ ಪೂರ್ಣ ಪ್ರಾಮಾಣಿಕ ಭಾವದಲ್ಲಿ ಪರಿಗಣಿಸಿ ಸೂಕ್ತ ಸುರಕ್ಷತೆ ಹಾಗೂ ಇತರೆ ಅಗತ್ಯ ವಸ್ತುಗಳ ಸಹಕಾರ ನೀಡುವುದು ಅನಿವಾರ್ಯ. ನಮ್ಮ ಮಧ್ಯ ನಮಗಾಗಿ ಶ್ರಮಿಸುವ ಆರೋಗ್ಯ ಹಾಗೂ ಕೌಟಂಬಿಕ ಸುರಕ್ಷತೆ ನಮ್ಮಲ್ಲರ ಹೊಣೆ ಎಂಬುದನ್ನು ಅರಿಯಬೇಕು.