ಕಾರ್ಟೂನ್ ನಲ್ಲಿ ಖಾಕಿಗೆ ಅದ್ಧೂರಿ ಚಾಲನೆ:
ಬೆಳಗಾವಿ: ಅಪರಾಧ ತಡೆದು ಸಾಮರಸ್ಯತೆ ಮೂಡಿಸುವ ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ನಾಗರಿಕರು ವಹಿಸಬೇಕಾದ ಎಚ್ಚರಿಕೆಯನ್ನು ಪ್ರತಿಬಿಂಬಿಸುವ ಪರಿಣಾಮಕಾರಿ ಕಾರ್ಟೂನ್ ನಲ್ಲಿ ಖಾಕಿ ಇಂದು ಬೆಳಿಗ್ಗೆ ಸುಂದರ ಪರಿಸರದ ಶರ್ಖತ್ ಉದ್ಯಾನದಲ್ಲಿ ಪ್ರಾರಂಭವಾಯಿತು.
ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಜೆ. ಸತೀಶಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪೊಲೀಸ್ ಆಯುಕ್ತ ಟಿ. ಜೆ. ಕೃಷ್ಣಭಟ್, ನ್ಯಾಯಾಧೀಶರಾದ ಬಸವರಾಜ ಚಿಗರೆಡ್ಡಿ, ದೇಶಪಾಂಡೆ ಜಿ. ಎಸ್, ಎಂ. ಎಂ. ಪಾಟೀಲ, ಪ್ರಭಾವತಿ, ಡಿಸಿಪಿ ಜಿ. ರಾಧಿಕಾ ಹಾಗೂ ಅಮರನಾಥರೆಡ್ಡಿ, ವಿವಿಧ ನ್ಯಾಯಾಧೀಶರು, ರೋಟರಿ ಕ್ಲಬ್ ಅಧ್ಯಕ್ಷ ಅವಿನಾಶ ಪೋತದಾರ, ಎಸಿಪಿ ಶಿವಕುಮಾರ, ಶಂಕರ ಮಾರಿಹಾಳ, ಗುರುಶಾಂತಪ್ಪ, ಇನ್ಸ್ ಪೆಕ್ಟರ್ ಜೆ. ಕಾಲಿಮಿರ್ಚಿ, ಅಡಿವೆಪ್ಪ ಗುದಿಗೆಪ್ಪ, ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ, ಪಾಲಿಕೆ ಹಾಗೂ ಕಾಂಟೋನ್ಮೆಂಟ್ ಸದಸ್ಯರು, ಹಾಜರಿದ್ದರು
ಚಿತ್ರಸ್ಪರ್ಧೇ: ಉದ್ಯಾನದ ಹುಲ್ಲು ಹಾಸಿನ ಮೇಲೆ ಕಿಕ್ಕಿರಿದಿದ್ದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತಮ್ಮಿಷಗಟದ ಚಿತ್ರ ಬರೆದು ಸಂತಸ ವ್ಯಕ್ತಪಡಿಸಿದರು.