ವ್ಯಾಪಕವಾಗಿ ಹರಡುತ್ತಿರುವ ವೈರಸ್…ಬೆಳಗಾವಿ ಪೋಲೀಸ್ ಫುಲ್ ಸೀರಿಯಸ್…..!!!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ಬೆಳಗಾವಿ ಪೋಲೀಸರು ಗಂಭೀರವಾಗಿ ಪರಿಗಣಿಸಿದ್ದು ನಾಳೆಯಿಂದ ಅತ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್ ಅನುಷ್ಠಾನ ಗೊಳಿಸಲು ನಿರ್ಧರಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 36 ಕ್ಕೆ ಏರಿಕೆ ಆಗುತ್ತಿದ್ದಂತೆಯೇ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗಳು,ಬೆಳಗಾವಿ ನಗರ ಹಾಗೂ ಜಿಲ್ಲೆ ಯಾದ್ಯಂತ ಲಾಕ್ ಡೌನ್ ಬಿಗಿಗೊಳಿಸಲು ಎಲ್ಲ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅನಗತ್ಯ ವಾಗಿ ಸುತ್ತಾಡುವವರಿಗೆ ನಾಳೆಯಿಂದ ಖಾಕಿ ಖದರ್ ಗೊತ್ತಾಗಲಿದೆ.ಯಾವುದೇ ಕಾರಣಕ್ಕೂ ಜನರನ್ನು ಅನವಶ್ಯಕವಾಗಿ ಸುತ್ತಾಡಲು ಬಿಡಲೇ ಬೇಡಿ ,ವಾಹನಗಳನ್ನು ಸೀಜ್ ಮಾಡುವ ಜೊತೆಗೆ,ಅವರ ವಿರುದ್ಧ ಕೇಸ್ ಹಾಕಿ ಎಂದು ಎಲ್ಲ ಪೋಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ರಣಕೇಕೇ ಹಾಕುತ್ತಿದ್ದು ಇದಕ್ಕೆ ಬ್ರೇಕ್ ಹಾಕಲು ಬೆಳಗಾವಿ ಪೋಲೀಸರು ಸಂಕಲ್ಪ ಮಾಡಿದ್ದು ಲಾಕ್ ಡೌನ್ ಬಿಗಿಗೊಳಿಸುವ ಮೂಲಕ ಬೆಳಗಾವಿ ಪೋಲೀಸ್ ನಿಜವಾಗಿಯೂ ಖಾಕಿ ಖದರ್ ತೋರಿಸಲಿದೆ.
ನಾಳೆಯಿಂದ ಅನಗತ್ಯವಾಗಿ ಸುತ್ತಾಡಿದ್ರೆ ಕೇಸ್ ಬಿಳೋದು ಗ್ಯಾರಂಟಿ…