ಬೆಳಗಾವಿ- ಬೆಳಗಾವಿ ಜಿಲ್ಲೆ ಆರೇಂಜ್ ಝೋನ್ ವ್ಯಾಪ್ತಿಗೆ ಬಂದಿದ್ದು ಕೇಂದ್ರ ಸರ್ಕಾರದ ಆರೇಂಜ್ ಝೋನಿನ ಎಲ್ಲ ಮಾರ್ಗಸೂಚಿಗಳು ಬೆಳಗಾವಿ ಜಿಲ್ಲೆಗೆ ಅನ್ವಯ ಆಗುತ್ತವೆ
ಆದರೆ ಬೆಳಗಾವಿ ನಗರದಲ್ಲಿ ಸಂಗಮೇಶ್ವರ ನಗರ,ಆಝಾದ್ ಗಲ್ಲಿ,ಕ್ಯಾಂಪ್ ಪ್ರದೇಶ ,ಅಮನ್ ನಗರ ಗಳು ಕಂಟೈನ್ಮೆಂಟ್ ಝೋನ್ ನಲ್ಲಿ ಬರುವದರಿಂದ ಬಹುತೇಕ ಬೆಳಗಾವಿ ನಗರವೇ ಕಂಟೈನ್ಮೆಂಟ್ ಝೋನ್ ನಲ್ಲಿ ಇರುವದರಿಂದ ಬೆಳಗಾವಿ ನಗರದಲ್ಲಿ ಯಾವ ರೀತಿಯಲ್ಲಿ ಸಡಲಿಕೆ ನೀಡಬಹುದು ಎನ್ನುವದರ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.
ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ಅವರ ಕಚೇರಿ ಆವರಣದಲ್ಲಿ ನಡೆದ ಪೋಲೀಸ್ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಬೆಳಗಾವಿ ನಗರದಲ್ಲಿ ಯಾವುದಕ್ಕೆ ಅನುಮತಿ ಕೊಡಬೇಕೋ ,ಯಾವುದನ್ನು ನಿರ್ಬಂಧ ಮಾಡಬೇಕು ಎನ್ನುವದರ ಬಗ್ಗೆ ಸುಧೀರ್ಘ ಚರ್ಚೆ ನಡೆದು ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ
ಬೆಳಗಾವಿ ನಗರದಲ್ಲಿ ಕಿರಾಣಿ ಅಂಗಡಿಗಳು,ಸ್ವೀಟ್ ಮಾರ್ಟ್,ಬೇಕರಿ ,ಹಾಲಿನ ಅಂಗಡಿ,ಔಷಧಿ ಅಂಗಡಿ ಸೇರಿದಂತೆ ಕೇವಲ ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರ ತೆರೆಯಬಹುದು,ಆದ್ರೆ ಈ ಅಂಗಡಿಕಾರರು ಕಡ್ಡಾಯವಾಗಿ ಸೋಸಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡುವ ಮಾರ್ಕಿಂಗ್ ಮಾಡಿರಬೇಕು ,ಅಂಗಡಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು,ಈ ವಿಷಯದಲ್ಲಿ ನಿಷ್ಕಾಳಜಿ ಮಾಡಿದವರಿಗೆ ಬೆಳಗಾವಿ ಪೋಲೀಸರು ಕಟ್ಟುನಿಟ್ಟಾಗಿ ದಂಡ ವಿಧಿಸುವಂತೆ ಬೆಳಗಾವಿ ನಗರದ ಎಲ್ಲ ಪೋಲೀಸ್ ಅಧಿಕಾರಿಗಳಿಗೆ,ಹಿರಿಯ ಅಧಿಕಾರಿಗಳು ಇಂದು ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಅಟೋಗಳು ಓಡಾಡಬಹುದು ಆದ್ರೆ ,ಒಂದು ಅಟೋದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪ್ರಯಾಣ ಮಾಡಬಹುದು 1+1 ಗೆ ಮಾತ್ರ ಅನುಮತಿ ಇದೆ.ಈ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧವೂ ಶಿಸ್ತಿನ ಕ್ರಮ ಜರುಗಿಸಲು ಪೋಲೀಸರು ನಿರ್ಧರಿಸಿದ್ದಾರೆ
ಬೈಕ್ ನಲ್ಲಿ ಕೇವಲ ಒಬ್ಬರೇ ಸವಾರಿ ಮಾಡಬಹುದು ಹಿಂಬದಿ ಸವಾರನಿಗೆ ಅವಕಾಶ ಇಲ್ಲ ಹಿಂಬದಿ ಸವಾರಿ ಮಾಡಿದ್ದಲ್ಲಿ ಹಿಂಬದಿಯ ಸವಾರಿಗೆ ಲಾಠಿ ಏಟು ಬಿಳೋದು ಗ್ಯಾರಂಟಿ
ಫೋರ್ ವ್ಹೀಲರ್ ( ಕಾರು) ನಲ್ಲಿ 1+2 ಅಂದ್ರೆ ಒಬ್ಬ ಚಾಲಕ ಮತ್ತೆ ಇಬ್ಬರು ಮಾತ್ರ ಪ್ರಯಾಣ ಮಾಡಬಹುದು
ಸ್ಟೇಶನರಿ ಅಂಗಡಿ,ಬಟ್ಟೆ ಅಂಗಡಿ ,ಕೋಲ್ಡ್ರೀಂಕ್ಸ,ಹೊಟೇಲ್ ,ರೆಸ್ಟೋರೆಂಟ್ ಬೀದಿ ಅಂಗಡಿ,ಬೀದಿ ವ್ಯಾಪಾರಿಗಳಿಗೆ ಅವಕಾಶ ಇಲ್ಲ
ಹೀಗೆ ಇಂದು ನಡೆದ ಪೋಲೀಸ್ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ವಿಷಯಗಳ ಕುರಿತು ಚರ್ಚಿಸಿ ಕೆಲವು ತೀರ್ಮಾಣಗಳನ್ನು ಕೈಗೊಳ್ಳಲಾಗಿದೆ
ಅಗತ್ಯ ವಸ್ತುಗಳ ಅಂಗಡಿಗಳ ತೆರವು, ಅಟೋ,ಬೈಕ್,ಕಾರುಗಳು ಸೇರಿದಂತೆ ವಾಹನಗಳ ಓಡಾಟಕ್ಕೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಅವಕಾಶ ಇದೆ.ಸಂಜೆ 7 ಗಂಟೆಯ ನಂತರ ಯಾರೊಬ್ಬರೂ ಮನೆಯಿಂದ ಹೊರಗೆ ಬಾರದಂತೆ ಕರ್ಫ್ಯು ಮಾದರಿಯ ಲಾಕ್ ಡೌನ್ ಮಾಡಲು ಬೆಳಗಾವಿ ನಗರದ ಪೋಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸಂಜೆ 7 ಗಂಟೆಯ ನಂತರ ಯಾರಾದ್ರು ಮನೆಯಿಂದ ಹೊರಗೆ ಬಂದ್ರೆ ಅವರು ಪೋಲೀಸರ ಲಾಠಿ ರುಚಿ ನೋಡುವದರ ಜೊತೆಗೆ ದಂಡ ತೆತ್ತುವದು ಗ್ಯಾರಂಟಿ