ಬೆಳಗಾವಿ-ಬೆಳಗಾವಿ ಕೆ ಎಸ್ ಆರ್ ಪಿ ಈಗ ಕೊರೋನಾ ಸುಳಿಯಲ್ಲಿ ಸಿಲುಕಿದೆ.ಕೆ ಎಸ್ ಆರ್ ಪಿ ASI ಯೊಬ್ಬರು ಕ್ವಾರಂಟೈನಲ್ಲಿದ್ದ ಸೊಂಕಿತ ಮಗಳನ್ನು ಭೇಟಿಯಾಗಿದ್ದರಿಂದ ಇವರ ಸಂಪರ್ಕದಲ್ಲಿದ್ದ ಇತರ ಸಹೋದ್ಯೋಗಿಗಳಿಗೆ ಆತಂಕ ಶುರುವಾಗಿದೆ.
ಹಿರೇಬಾಗೇವಾಡಿ ಗ್ರಾಮದಲ್ಲಿ ಎರಡನೇಯ ಸಂಪರ್ಕಕ್ಕೆ ಬಂದ ಮಗಳನ್ನು ಶಂಕಿತೆ ಎಂದು ಪರಗಣಿಸಿ ಬೆಳಗಾವಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಇಂದು ಬೆಳಿಗ್ಗೆ ಬಿಡುಗಡೆಯಾಗಿರುವ ಹೆಲ್ತ್ ಬುಲಿಟೀನ್ ನಲ್ಲಿ ಮಗಳಿಗೆ ಸೊಂಕು ಇರುವದು ದೃಡವಾಗಿದ್ದು ಕೆ ಎಸ್ ಆರ್ ಪಿ ಪೋಲೀಸರಿಗೆ ಈಗ ನಡುಕ ಶುರುವಾಗಿದೆ.
ಇಂದು ಬೆಳಿಗ್ಗೆ ತಂದೆ ಮಗಳನ್ನು ಭೇಟಿಯಾಗಲು ಹೋದಾಗ ಮಗಳು ತಂದೆಯ ಎದುರು ಕಣ್ಣೀರು ಹಾಕಿದ್ದಾಳೆ ಮಗಳ ಮಮತೆಯಲ್ಲಿ ಮೈ ಮರೆತ ಕೆ ಎಸ್ ಆರ್ ಪಿ ASI ಮಗಳನ್ನು ಸಂತೈಸಿದ್ದಾರೆ.
ಮದ್ಯಾಹ್ನದ ಹೊತ್ತೆಗೆ ಮಗಳಿಗೆ ಸೊಂಕು ಇರುವದು ದೃಡವಾದ ಬಳಿಕ ತಂದೆ ಕೆ ಎಸ್ ಆರ್ ಪಿ ASI ಯೊಬ್ಬರನ್ನು ಈಗ ಕ್ವಾರಂಟೈನ್ ಮಾಡಲಾಗಿದೆ ಪರೀಕ್ಷೆಗಾಗಿ ಇವರ ಗಂಟಲು ದ್ರವ ಪಡೆಯಲಾಗಿದೆ. ಸಂಪರ್ಕದಲ್ಲಿ ಇರುವ ಕೆ ಎಸ್ ಆರ್ ಪಿ ಸಹೋದ್ಯೋಗಿ ಗಳನ್ನು ಈಗ ಕ್ವಾರಂಟೈನ್ ಮಾಡಲಾಗುತ್ತಿದೆ.
ಕೆ ಎಸ್ ಆರ್ ಪಿ. ಎ ಎಸ್ ಐ ಸಂಪರ್ಕಕ್ಕೆ ನಗರ ಪೋಲೀಸ್ ಠಾಣೆಯ ಎ ಎಸ್ ಐ ಯೊಬ್ಬರು ಸಂಪರ್ಕಕ್ಕೆ ಬಂದಿರುವ ಹಿನ್ನಲೆಯಲ್ಲಿ ಸಿವ್ಹಿಲ್ ಪೋಲೀಸರಿಗೂ ಈಗ ಕೊರೋನಾ ನಡುಕ ಶುರುವಾಗಿದ್ದು ತಂದೆ ಮಗಳ ಮಮತೆ,ಇವರ ಸಂಪರ್ಕಕ್ಕೆ ಬಂದಿರುವ ಇತರ ಪೋಲೀಸರಿಗೂ ಸಂಕಟ ತಂದಿದೆ.