ಬೆಳಗಾವಿ- ಲಾಕ್ ಡೌನ್ ಒತ್ತಡದ ನಡುವೆಯೂ ಬೆಳಗಾವಿ ನಗರದ ಮಾರ್ಕೆಟ್ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿ ಜಮೀನು ಮಾಲೀಕನನ್ನು ಕಿಡ್ನ್ಯಾಪ್ ಮಾಡಿದ ನಾಲ್ಕು ತಿಂಗಳ ಕಾಲ ಈ ಮಾಲೀಕನನ್ನು ಕೂಡಿಹಾಕಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್ ಮಾಡುವಲ್ಲಿ ಮಾರ್ಕೆಟ್ ಪೋಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಬಾಂದೂರ ಗಲ್ಲಿಯ ನಿವಾಸಿ ಅಣ್ಣಾಸಾಹೇಬ ಚೌಗಲೆ ಬ್ರಹ್ಮಚಾರಿ ಈತನ ಹೆಸರಿನಲ್ಲಿ ಬೆಳಗಾವಿಯ ಸಾಂಬ್ರಾ ರಸ್ತೆಯ ಪೋತದಾರ ಶಾಲೆಯ ಎದುರು 2ಎಕರೆ 23 ಗುಂಟೆ ಕೋಟ್ಯಾಂತರ ರೂ ಬೆಲೆ ಬಾಳುವ ಜಮೀನು ಇರುತ್ತದೆ,ಅದಲ್ಲದೇ ಇವನ ಹೆಸರಿನಲ್ಲಿ ಸುಮಾರು ಮೂವತ್ತು ಲಕ್ಷ ರೂ ಹಣ ಡಿಪಾಜಿಟ್ ಇರುತ್ತದೆ ನಾಲ್ಕು ತಿಂಗಳ ಹಿಂದೆ ಈ ಕೋಟ್ಯಾಧೀಶ ಅಣ್ಣಾಸಾಹೇಬ ಚೌಗಲೆ ನಾಪತ್ತೆಯಾಗಿದ್ದಾನೆ ಎಂದು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ
ನಾಲ್ಕು ತಿಂಗಳ ಹಿಂದೆಯೇ ಬೆಳಗಾವಿ ಖತರ್ನಾಕ್ ಗ್ಯಾಂಗ್ ಕೋಟ್ಯಾಧೀಶ ಅಣ್ಣಾಸಾಹೇಬ ಚೌಗಲೆ ಯನ್ನು ಕಿಡ್ನ್ಯಾಪ್ ಮಾಡಿ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಫಾರ್ಮ ಹೌಸ್ ಗಳಲ್ಲಿ ಕೂಡಿ ಹಾಕಿ,ಕೊನೆಗೆ ಮಹಾರಾಷ್ಟ್ರದ ಗಡಿಂಗ್ಲಜ್ ತಾಲ್ಲೂಕಿನ ಕಡಲಗಿ ಗ್ರಾಮದಲ್ಲಿ ಇಡಲಾಗಿತ್ತು
ಎರಡು ತಿಂಗಳ ಹಿಂದೆ ಖತರ್ನಾಕ್ ಗ್ಯಾಂಗ್ ಕಿಡ್ನ್ಯಾಪ ಆಗಿದ್ದ ಅಣ್ಣಾಸಾಹೇಬ ನನ್ನು ಹೆದರಿಸಿ ಜಿಪಿ ಬರೆಯಿಸಿಕೊಂಡು ಜಿಪಿ ರಜಿಸ್ಟರ್ ಮಾಡಿಸಿಕೊಳ್ಳಲು ರಜಿಸ್ಟರ್ ಕಚೇರಿಗೆ ಹೋಗಬೇಕೆನ್ನುವಷ್ಟರಲ್ಲಿ ಲಾಕ್ ಡೌನ್ ಶುರುವಾದ ಹಿನ್ನಲೆಯಲ್ಲಿ ಕಿಡ್ನ್ಯಾಪರ್ ಗಳ ಮಾಸ್ಟರ್ ಪ್ಲ್ಯಾನ್ ಫೇಲ್ ಆಗುತ್ತದೆ
ಲಾಕ್ ಡೌನ್ ಮುಗಿಯುವತನಕ ಅಣ್ಣಾಸಾಹೇಬ ಚೌಗಲೆಯ ಬ್ಯಾಂಕಿನಲ್ಲಿರುವ ಹಣ ಡ್ರಾ ಮಾಡಿಸಿಕೊಳ್ಳಲು ಅಣ್ಣಾಸಾಹೇಬ ನನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ ಕರೆದುಕೊಂಡು ಬಂದಾಗ ಈ ಖತರ್ನಾಕ್ ಗ್ಯಾಂಗ್ ಬೆಳಗಾವಿ ಮಾರ್ಕೆಟ್ ಠಾಣೆಯ ಬಲೆಗೆ ಬೀಳುತ್ತದೆ.
ಅಣ್ಣಾಸಾಹೇಬ ಚೌಗಲೆಯನ್ನು ಅಪಹರಣ ಮಾಡಿ ಕೋಟ್ಯಾಂತರ ರೂ ಆಸ್ತಿಯನ್ನು ಲಪಟಾಯಿಸಲು ಯತ್ನಿಸಿದ ಆರೋಪದ ಮೇಲೆ ಬೆಳಗಾವಿ ಮಹಾದ್ವಾರ ರಸ್ತೆಯ ನಿವಾಸಿ,ವಿನಾಯಕ ಶಂಕರ ಪ್ರದಾನ,ಹೊಸ ಗಾಂಧಿನಗರದ ಶಿವನಾಥ ಉರ್ಫ ಪಿಂಟು ರಾನಬಾ ರೇಡೇಕರ,ಪುಲಬಾಗ ಗಲ್ಲಿಯ ಅಮೀತ ಯಲ್ಲಪ ಮಜಗಾಂವಿ ಗಾಂಧಿನಗರದ ಮುರಾರಿ ಬಾಬಾಜಾನ ಖಾನಾಪೂರಿ,ಮಹಾರಾಷ್ಟ್ರ ಗಡಿಂಗ್ಲಜ್ ತಾಲ್ಲೂಕಿನ ಹಡಲಗೆ ಗ್ರಾಮದ ಸುರೇಶ ಮಹಾದೇವ ಪಾಟೀಲ,ಬೆಳಗಾವಿ ತಾಲ್ಲೂಕಿನ ಬೆಳವಟ್ಟಿ ಗ್ರಾಮದ ಚೇತನ ನಾರಾಯಣ ಪಾಟೀಲ ,ಅನಿಗೋಳ ಗ್ರಾಮದ ಸಂಜಯ ಪ್ರಕಾಶ ಕೌಜಲಗಿ ಉರ್ಫ ಭಜಂತ್ರಿ ,ಬೆಳಗಾವಿ ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ,ರೈತ ಗಲ್ಲಿಯ ಅಮೀತ ಪರಶರಾಮ ಧಾಮಣೇಕರ ಹೀಗೆ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಅಪಹರಣಕ್ಕೆ ಬಳಿಸಿದ ಕಾರು,ಬೈಕ್ ಹಾಗೂ ಮೋಬೈಲ್ ಪೋನ್ ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.