Breaking News

ಇಂದು ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಬೆಳಗಾವಿ ಮಾರ್ಕೆಟ್ ಬಂದ್

ಬೆಳಗಾವಿ- ಇಂದು ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಬೆಳಗಾವಿಯಲ್ಲಿ ಕರ್ಫ್ಯು ಮಾದರಿಯ ಲಾಕ್ ಡೌನ್ ಇರುತ್ತದೆ ಎಂದು ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಇಂದು ಶನಿವಾರ ಸಂಜೆ 7 ಗಂಟೆಯಿಂದ ಬೆಳಗಾವಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಇರುತ್ತದೆ. ರವಿವಾರ ಫುಲ್ ಡೇ ಬೆಳಗಾವಿ ಮಾರುಕಟ್ಟೆ ಬಂದ್ ಇರುತ್ತದೆ.ಸೋಮವಾರ ಬೆಳಿಗ್ಗೆ 7 ಗಂಟೆಗೆ ಬೆಳಗಾವಿ ಮಾರುಕಟ್ಟೆ ಆರಂಭವಾಗುತ್ತದೆ ಮೇಡಿಕಲ್ ಎಮರ್ಜನ್ಸಿ ಬಿಟ್ರೆ ಬೇರೆ ಯಾವ ಅಂಗಡಿಯೂ ತೆರೆಯುವ ದಿಲ್ಲ ,ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ಇರುವದಿಲ್ಲ,ಯಾರಾದರು ಈ ಸಂಧರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವದಾಗಿ ಡಿಸಿಪಿ ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದ್ದಾರೆ.

ಇಂದು ಸಂಜೆ 7 ಗಂಟೆಗೆ ಸರಿಯಾಗಿ ಬೆಳಗಾವಿ ಮಾರುಕಟ್ಟೆ ಬಂದ್ ಆಗಲಿದ್ದು,ರವಿವಾರ ದಿನಪೂರ್ತಿ ಬಂದ್ ಇದ್ದು ಸೋಮವಾರ ಬೆಳಿಗ್ಗೆಯೇ ಬೆಳಗಾವಿ ಮಾರುಕಟ್ಟೆ ಶುರುವಾಗಲಿದ್ದು,ಬೆಳಗಾವಿ ನಗರ ನಿವಾಸಿಗಳು ಅಗತ್ಯ ಆಹಾರ,ಮತ್ತು ಇನ್ನಿತರ ಸಾಮಗ್ರಿಗಳನ್ನು ಇವತ್ತೇ ಸಂಜೆ 7 ಗಂಟೆಯ ಒಳಗಾಗಿ ಖರೀಧಿ ಮಾಡಲು ಅವಕಾಶ ಇರುತ್ತದೆ.

ಇಂದು ಸಂಜೆ 7 ಗಂಟೆಯಿಂದ ಬೆಳಗಾವಿ ನಗರದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ ಇಂದು ಸಂಜೆ 7 ಗಂಟೆಯ ನಂತರ ಸೋಮವಾರ ಬೆಳಗಿನ ವರೆಗೆ ಯಾರಾದರೂ ಮನೆಯಿಂದ ಹೊರಗೆ ಬಂದ್ರೆ ಅವರ ವಿರುದ್ಧ ಕೇಸ್ ಬಿಳೋದು ಗ್ಯಾರಂಟಿ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *