ಬೆಳಗಾವಿ-ಬಿಲ್ಡರ್ ಗಳಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಫೋನ್ ಮಾಡಿ, ಬೇಡಿದಷ್ಟು ಹಣ ಕೊಡದಿದ್ದರೆ ಖಲ್ಲಾಸ್ ಮಾಡುತ್ತೇವೆ,ಎಂದು ಬೆದರಿಸುತ್ತಿದ್ದ,ಇಬ್ಬರು ರೌಡಿಗಳನ್ನು ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಕ್ಯಾಂಪ್ ಪೋಲೀಸ್ ಠಾಣೆ ಸೇರಿದಂತೆ ನಗರದ ಹಲವಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿಗಳು ಫೋನ್ ಮುಖಾಂತರವೇ ಹಣವಂತರನ್ನು ಬೆದರಿಸುತ್ತ,ತಲೆಮರೆಸಿಕೊಂಡಿದ್ದರು.
ಖಡೇಬಝಾರ್ ಪೋಲೀಸರು ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಲೆ ಬೀಸಿ ಇಬ್ಬರು ಆರೋಪಿಗಳನ್ನು ಬಂಧಿಸಿ,ಒಂದು ಕಾರು,ಮಾರಕಾಸ್ತ್ರಗಳು,ಮತ್ತು ಒಂದು ಬೈಕ್ ಮತ್ತು ಮೋಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಮೂಲತಹ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ,ಹಾಲಿ ಬೆಳಗಾವಿ ಶಾಸ್ತ್ರೀ ನಗರದ ನಿವಾಸಿ,ವಿಶಾಲಸಿಂಗ್ ವಿಜಯಸಿಂಗ್ ಚವ್ಹಾನ್,(21) ಮತ್ರು ಶಾಸ್ತ್ರೀ ನಗರದ ಪ್ರಥಮೇಶ ನಾರಾಯಣ ಗಣಿಕೊಪ್ಪ ಎಂಬ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.