ಬೆಳಗಾವಿ- ನಿಪ್ಪಾಣಿಯ ಕುಗನೊಳ್ಳಿ,ರಾಯಬಾಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿದ ಮೂವರು ಪೋಲೀಸ್ ಪೇದೆಗಳಿಗೆ ಕೊರೋನಾ ಸೊಂಕು ಇರುವದು ದೃಡವಾದ ಹಿನ್ನಲೆಯಲ್ಲಿ ಮೂವರನ್ನು ಐಸೋಲೇಟ್ ಮಾಡಲಾಗಿದೆ.
ಸೊಂಕು ಪತ್ತೆಯಾದ ಮೂವರು ಡಿ ಆರ್ ಪೇದೆಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿದ್ದು ಈ ಮೂವರು ಪೇದೆಗಳು ಬೆಳಗಾವಿ ನಗರದ ಪೋಲೀಸ್ ಹೆಡ್ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು.
ಈ ಮೂವರು ಪೋಲೀಸ್ ಪೇದೆಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪೋಲೀಸ್ ಹೆಡ್ ಕ್ವಾಟರ್ಸ ಪ್ರದೇಶದಲ್ಲೇ ಕ್ವಾರಂಟೈನ್ ಮಾಡುತ್ತಿದ್ದಾರೆ ಎಂಬ ಸುದ್ಧಿ ಹರಡುತ್ತಿದ್ದಂತೆಯೇ ಅಲ್ಲಿಯ ನಿವಾಸಿಗಳು ಅದಕ್ಕೆ ವಿರೋಧ ವ್ಯೆಕ್ತ ಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ