ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕುಗನೋಳಿ ಚೆಕ್ ಪೋಸ್ಟ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಕರ್ತವ್ಯ ನಿಭಾಯಿಸಿದ ನಿಪ್ಪಾಣಿ ಸರ್ಕಲ್ ಇನೆಸ್ಪೆಕ್ಟರ್ ಗೂ ಕೊರೋನಾ ಸೊಂಕು ಇರುವದು ದೃಡವಾಗಿದೆ.
ಸೊಂಕು ದೃಡವಾಗಿರುವ ನಿಪ್ಪಾಣಿ ಸಿಪಿಐ ಅವರು ಕಳೆದ ಐದು ದಿನಗಳದ ಕ್ವಾರಂಟೈನ್ ನಲ್ಲಿ ಇದ್ದರು,ಅವರಿಗೆ ಸೊಂಕಿನ ಯಾವುದೇ ಲಕ್ಷಣ ಗಳು ಕಂಡು ಬಂದಿಲ್ಲ ಆದ್ರೆ ಸೊಂಕು ಇರುವದು ದೃಡವಾಗಿದೆ.
ನಿಪ್ಪಾಣಿ ಸಿಪಿಐ ಅವರು ಕುಗನೋಳಿ ಚೆಕ್ ಪೋಸ್ಟ್ ಸೇರಿದಂತೆ ಸ್ಟೇಶನ್ ಹೊರಗಡೆಯೇ ಕರ್ತವ್ಯ ನಿಭಾಯಿಸಿರುವದರಿಂದ ನಿಪ್ಪಾಣಿ ಸಿಪಿಐ ಕಚೇರಿ ಸೀಲ್ ಡೌನ್ ಮಾಡುತ್ತಿಲ್ಲ. ಸಿಪಿಐ ಅವರ ಪ್ರಾಥಮಿಕ ಸಂಪರ್ಕ ಕ್ಕೆ ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ.
ಸಿಪಿಐ ಅವರಿಗೆ ಸೊಂಕು ದೃಡವಾಗಿರುವ ಕುರಿತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಖಚಿತ ಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ