ಬಬೆಳಗಾವಿ- ಬೆಳಗಾವಿಯಲ್ಲಿ ಖಾಕಿ ಖದರ್ ತೋರಿಸುವ ಮೂಲಕ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಬೆಳಗಾವಿಯ ಮಾರ್ಕೆಟ್ ಎಸಿಪಿ ಯಾಗಿ ಕರ್ತವ್ಯನಿಭಾಯಿಸಿದ್ದ ಎಸಿಪಿ ನಾರಾಯಣ ಭರಮಣಿ ಅವರನ್ನು ಮತ್ತೆ ಬೆಳಗಾವಿ ಮಹಾನಗರಕ್ಕೆ ನಿಯೋಜಿಸುವ ಪ್ರಯತ್ನ ನಡೆದಿದೆ.
ಬೆಳಗಾವಿ ಮಾರ್ಕೆಟ್ ಎಸಿಪಿ ಯಾಗಿದ್ದ ನಾರಾಯಣ ಭರಮಣಿ ಅವರನ್ನು ಸರ್ಕಾರ ಖಾನಾಪೂರ ಪೋಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಮಾಡಿ ಇತ್ತೀಚಿಗೆ ಸರ್ಕಾರ ಆದೇಶ ಮಾಡಿತ್ತು,ಆದ್ರೆ ಬೆಳಗಾವಿ ಮಹಾನಗರ ಅತೀ ಸೂಕ್ಷ್ಮ ನಗರವಾಗಿದ್ದು ಕಾನೂನು ಸುವ್ಯೆವಸ್ಥೆ ಕಾಪಾಡಲು ಅನಕೂಲವಾಗಲೆಂದು ಬೆಳಗಾವಿ ಮಹಾನಗರದ ಚಟುವಟಿಕೆಗಳ ಬಗ್ಗೆ ಅಪಾರ ಅನುಭವ ಹೊಂದಿರುವ, ನಾರಾಯಣ ಭರಮಣಿ ಅವರನ್ನು ಬೆಳಗಾವಿ ಮಹಾನಗರದ,CCIB ಎಸಿಪಿಯಾಗಿ ನೇಮಿಸಲು ಬೆಂಗಳೂರಿನಲ್ಲಿ ಪ್ರಯತ್ನಗಳು ನಡೆದಿವೆ.
ಬೆಳಗಾವಿಯ ಸಿಸಿಐಬಿ ಎಸಿಪಿಯಾಗಿ ನಾರಾಯಣ ಭರಮಣಿ ಅವರು ಮತ್ತೆ ಬೆಳಗಾವಿಗೆ ಬರುವ ಸಾದ್ಯತೆಗಳು ಹೆಚ್ಚಾಗಿವೆ.
CCIB ಇಲ್ಲವಾದರೆ,ಯಾವುದಾದರೂ ಒಂದು ವಿಭಾಗಕ್ಕೆ ನಾರಾಯಣ ಭರಮಣಿ ಅವರನ್ನು ಡೆಪ್ಯುಟ್ ಮಾಡಬೇಕು,ಎಂದು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ
ಎಸಿಪಿ ನಾರಾಯಣ ಭರಮಣಿ ಅವರ ವರ್ಗಾವಣೆಯಿಂದ,ಸಂಬ್ರಮದಲ್ಲಿದ್ದ ಸಮಾಜ ಘಾತುಕ ಶಕ್ತಿಗಳಿಗೆ ಈಗ ಮತ್ತೆ ನಡುಕ ಶುರುವಾಗಿದೆ.