Breaking News

ಗಾಂಜಾ ಸೇಲ್ ಮಾಡಾಕ್ ಕೊಲ್ಹಾಪೂರದಿಂದ ಬೆಳಗಾವಿಗೆ ಬರಾತಾರ್ರೀ…!!!

ಬೆಳಗಾವಿ- ನಗರ ಪೋಲೀಸ್ ಆಯುಕ್ತ ಡಾ. ಬೋರಲಗಯ್ಯ ಅವರು ಗಾಂಜಾ ಮಾರಾಟ ಮತ್ತು ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಮರ ಸಾರಿದ್ದಾರೆ. ಬೆಳಗಾವಿ ಮಹಾನಗರವನ್ನು ಗಾಂಜಾ,ಪನ್ನಿದಂತಹ ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ನಗರ ಪೋಲೀಸ್ ಆಯುಕ್ತರು ಬೆಳಗಾವಿ ಮಹಾನಗರದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದೆ,ಅದಕ್ಕೆ ಯುವಕರು ಬಲಿಯಾಗುತ್ತಿದ್ದಾರೆ,ಎನ್ನುವ ಅಂಶವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಅವರು,ಗಾಂಜಾ ವಿರುದ್ಧ ಸಮರ ಸಾರಿದ್ದಾರೆ.

ನಗರ ಪೋಲೀಸ್ ಆಯುಕ್ತರ ವಿಶೇಷ ಕಾಳಜಿಯಿಂದಾಗಿ ಬೆಳಗಾವಿ ಮಹಾನಗರದ ಪೋಲೀಸ್ ಠಾಣೆಗಳಲ್ಲಿ ಗಾಂಜಾ ಮಾರಾಟದ ಬಗ್ಗೆ ದಿನಕ್ಕೊಂದು ಪ್ರಕರಣ ದಾಖಲಾಗುತ್ತಿದೆ.ಗಾಂಜಾ ಮಾರಾಟಗಾರರು ಸರದಿಯಂತೆ ಜೈಲಿಗೆ ಹೋಗುತ್ತಿರುವದು ಒಳ್ಳೆಯ ಬೆಳವಣಿಗೆ ಆಗಿದೆ.

ಶುಕ್ರವಾರ ಬೆಳಗಾವಿಯ ಶಹಾಪೂರ ಠಾಣೆಯಲ್ಲಿ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಯುವಕನೊಬ್ಬ ಗಾಂಜಾ ಮಾರಾಟ ಮಾಡಲು ಮಹಾರಾಷ್ಟ್ರದ ಕೊಲ್ಹಾಪೂರದಿಂದ ಬೆಳಗಾವಿಗೆ ಬಂದಿರುವ ಅಂಶ ಬೆಳಕಿಗೆ ಬಂದಿರುವದು ಆತಂಕಕಾರಿ ಸಂಗತಿಯಾಗಿದೆ.ಈ ಯುವಕನಿಗೆ ಗೋಕಾಕಿನ ಯುವಕನೊಬ್ಬ ಕೈ ಜೋಡಿಸಿದ್ದು ಇಬ್ಬರೂ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ ಮಹಾನಗರ ಗೋವಾ,ಕರ್ನಾಟಕ,ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿದೆ, ಪಕ್ಕದ ಗೋವಾ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ವಾಣಿಜ್ಯ ಸೇರಿದಂತೆ ಬಹಳಷ್ಟು ವಿಚಾರಗಳಲ್ಲಿ ಬೆಳಗಾವಿಯ ಜೊತೆಗೆ ಉತ್ತಮ ಸಂಪರ್ಕವಿದೆ ಈ ಸಂಪರ್ಕ ಈಗ ಗಾಂಜಾ ಮಾರಾಟಕ್ಕೆ ಸೇತುವೆಯಾಗುತ್ತಿರುವದು ದುರದೃಷ್ಟಕರ ಸಂಗತಿಯಾಗಿದೆ.

ನಿನ್ನೆ ಶುಕ್ರವಾರ ಬೆಳಗಾವಿಯ ಶಹಾಪೂರ ಠಾಣೆಯ ಇನೆಸ್ಪೆಕ್ಟರ್ ಬಡಿಗೇರ ಅವರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ, ಅದರಲ್ಲಿ ಓರ್ವನು ಮುದಸ್ಸರ್ ಅಲ್ಲಾಭಕ್ಷ ಫನಿಬಂದ್ ( 28) ಎಂಬಾತ ಗೋಕಾಕದವನು ವಾಹೀದ್ ಅಜ್ಮಲ್ ಮುನ್ಸಿ ಎಂಬಾತ ಕೊಲ್ಹಾಪೂರದವನು ಎಂಬುದು ಗೊತ್ತಾಗಿದೆ‌.

ಬೆಳಗಾವಿಯ ನ್ಯು ಗಾಂಧಿ ನಗರ,ಉಜ್ವಲ್ ನಗರ,ಅಮನ್ ನಗರ, ಅಂಬಲಿ ಮಾರ್ಕೆಟ್ ಏರಿಯಾ,ಸೇರಿದಂತೆ ಮಹಾನಗರದಲ್ಲಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆದಿರುವದು ಸತ್ಯ.ನಗರ ಪೋಲೀಸ್ ಆಯುಕ್ತರು ಈ ಭಾಗದ ಬೀಟ್ ಪೋಲೀಸರನ್ನು ವಿಚಾರಿಸಿದರೆ ಗಾಂಜಾ ಮಾರಾಟದ ಜಾಲ ಬಯಲಾಗುವುದು ನಿಶ್ಚಿತ ಇದರಲ್ಲಿ ಅನುಮಾನವೇ ಇಲ್ಲ.

ಗಾಂಜಾ ಮಾರಾಟದ ಜಾಲವನ್ನು ಪತ್ತೆ ಮಾಡುವ ಬೀಟ್ ಪೋಲೀಸರಿಗೆ ಇಲಾಖೆ ಬಹುಮಾನ ನೀಡುವ ಪರಿಪಾಠವನ್ನು ಶುರು ಮಾಡಿದ್ದೇ ಆದಲ್ಲಿ ಬೆಳಗಾವಿ ಮಹಾನಗರ ಗಾಂಜಾದಿಂದ ಮುಕ್ತವಾಗುವದರಲ್ಲಿ ಸಂಶಯವೇ ಇಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *