ಬೆಳಗಾವಿ- ಬೆಳಗಾವಿ ನಗರದ ಯುವಕರು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಬೆಳಗಾವಿ ಪೋಲೀಸರು ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು ಬುಧವಾರ ನಗರದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶ ಪಡಿಸಿಕೊಂಡಿದ್ದಾರೆ
ನಗರದ ಗಾಂಧೀ ನಗರದಲ್ಲಿರುವ ಬಂಟರ ಭವನದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೋಲೀಸರು 40 ಕೆಜಿ ಗಾಂಜಾ ವಶ ಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ
ಗಾಂಧೀ ನಗರದ ಶಾಫೀನ್ ದಾವಲ ಮಲೀಕ ಬೆಲ್ಲದ ಬಾಗೇವಾಡಿಯ ಶೀತಲ ಮಹಾದೇವ ಸಂಜೀವಗೋಳ, ಬೆಳಗಾವಿ ಜಟ್ ಪಟ್ ಕಾಲೋನಿಯ ಶಬ್ಬೀರ ಜಿಲಾನಿ ಅತ್ತಾರ ಎಂಬಾತರನ್ನು ಬಂದಿಸಿ 40 kg ಗಾಂಜಾ ಒಂದು ಅಟೋ ರಿಕ್ಷಾ ಒಂದು ದ್ವಿಚಕ್ರ ವಾಹನವನ್ನು ಪೋಲೀಸರು ವಶ ಪಡಿಸಿಕೊಂಡಿದ್ದಾರೆ
ಆರೋಪಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಯಿಂದ ಗಾಂಜಾ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದರು ಬೆಳಗಾವಿಯ ಸಿಸಿಬಿ ಪೋಲೀಸರು ಸಿಪಿಐ ಗಡ್ಡೇಕರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು ಭರ್ಜರಿ ಕಾರ್ಯಾಚರಣೆ ನಡೆಸಿದ ಪೋಲೀಸರಿಗೆ ಸೂಕ್ತ ಬಹುಮಾನ ಕೊಡಲಾಗುವದು ಎಂದು ನಗರ ಪೋಲೀಸ್ ಆಯುಕ್ತ ಕೃಷ್ಣ ಭಟ್ ತಿಳಿಸಿದ್ದಾರೆ