ಗೋಕಾಕ್-ಸಿನಿಮಾ ನೋಡಿ ಹಿರೋನಂತೆ ಹೇರ್ ಸ್ಟೈಲ್ ಮಾಡಿದ್ದನ್ನು ಹಿರೋ ಹಾಕಿದ ಡ್ರೆಸ್ ಹೊಲಿಸಿದ್ದನ್ನು ನಾವು ನೋಡಿದ್ದೇವೆ. ಆದ್ರೆ ವೆಬ್ ಸಿರೀಸ್ ನೋಡಿ , ಖೋಟಾ ನೋಟು ಪ್ರಿಂಟ್ ಮಾಡಿ ಅವುಗಳನ್ನು ಚಲಾವಣೆ ಮಾಡುವಾಗ ಗ್ಯಾಂಗ್ ಪೋಲೀಸರಿಗೆ ಸಿಕ್ಕಿ ಬಿದ್ದಿದೆ
ಫರ್ಜಿ ಹಿಂದಿ ವೆಬ್ ಸೀರಿಜ್ ನೋಡಿದ ಈ ಗ್ಯಾಂಗ್ ಬೆಳಗಾವಿ ಗಡಿ ಭಾಗದಲ್ಲಿ ಖತರ್ನಾಕ್ ಖದೀಮರು
ಸಿನೆಮಾ ಮಾದರಿಯಲ್ಲೇ ಖೋಟಾ ನೋಟು ಪ್ರಿಂಟ್ ಮಾಡಿ ಅವುಗಳನ್ನು ಚಲಾವಣೆ ಮಾಡುವಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೂರು ರೂಪಾಯಿ, ಐದನೂರು ರೂಪಾಯಿ ಮುಖ ಬೆಲೆಯ ನೋಟನ್ನೇ ಪ್ರಿಂಟ್ ಮಾಡಿ,ಒಂದು ಲಕ್ಷ ಅಸಲಿ ಕ್ಯಾಶ್ ಗೆ ಐದು ಲಕ್ಷ ಖೋಟಾ ನೋಟು ಚಲಾವಣೆ ಮಾಡ್ತಿದ್ದ ಗ್ಯಾಂಗ್.
ಹಲವು ದಿನಗಳಿಂದ ಆ್ಯಕ್ಟೀವ್ ಇದೇ ಕೆಲಸ ಮಾಡುತ್ತಿದ್ದ ಆರು ಜನರ ತಂಡ ಖೆಡ್ಡಾಗೆ ಬಿದ್ದಿದೆ.
ಬಂಧಿತರಿಂದ ಅಪಾರ ಪ್ರಮಾಣದ ಖೋಟಾ ನೋಟು, ಪ್ರಿಂಟರ್, ಮಷಿನ್, ಸ್ಕ್ರೀನಿಂಗ್ ಬೋರ್ಡ್, ಪೆಂಟ್, ಪ್ರಿಂಟಿಂಗ್ ಪೇಪರ್, ಆರು ಮೊಬೈಲ್ ಜಪ್ತಿ ಮಾಡಲಾಗಿದೆ.ಒಂದೇ ವರ್ಷದಲ್ಲಿ ಗಡಿ ಭಾಗದಲ್ಲಿ ತಗ್ಲಾಕ್ಕೊಂಡ ಎರಡನೇ ಖೋಟಾ ನೋಟು ಗ್ಯಾಂಗ್ ಇದಾಗಿದೆ.
ಗೋಕಾಕ್ ನಗರದ ಕಡಬಗಟ್ಟಿ ಗುಡ್ಡದಲ್ಲಿ ಕಾರು ಜಪ್ತಿ ವೇಳೆ ತಗ್ಲಾಕ್ಕೊಂಡ ಗ್ಯಾಂಗ್.ಈ ವೇಳೆ 100 ಮುಖಬೆಲೆಯ 305 ಹಾಗೂ 500 ಮುಖಬೆಲೆಯ 6,792 ಖೋಟಾ ನೋಟು ಪತ್ತೆಯಾಗಿವೆ.ಬಳಿ ತನಿಖೆ ನಡೆಸಿದಾಗ ಅರಬಾವಿಯಲ್ಲಿ ಮನೆ ಮಾಡಿ ಪ್ರಿಂಟ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.ರಾತ್ರಿ ವೇಳೆ ಖೋಟಾ ನೋಟು ಪ್ರಿಂಟ್ ಮಾಡಿ ಅಸಲಿಯಂತೆ ಮಾರಾಟ.ಮೇಲೆ ಅಸಲಿ ನೋಟು ಒಳಗೆ ಖೋಟಾ ನೋಟಿಟ್ಟು ಹಲವರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡಿ,
ಬಾಗಲಕೋಟೆ, ಮಹಲಿಂಗಪುರ, ಗೋಕಾಕ್, ಮೂಡಲಗಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರು.
ಬಂಧಿತರಿಂದ 5,23,900 ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು.ಅನ್ವರ್ ಯಾದವಾಡ, ಸದ್ದಾಂ ಯಡಳ್ಳಿ, ರವಿ ಹ್ಯಾಗಾಡಿ, ದುಂಡಪ್ಪ ಒಣಶೆಣವಿ, ವಿಠ್ಠಲ್ ಹೊಸತೋಟ, ಮಲ್ಲಪ್ಪ ಕುಂದಾಳಿ ಎಂಬಾತರು ಆರೋಪಿಗಳಾಗಿದ್ದು ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಎಂದುಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.