ಬೆಳಗಾವಿ- ಬರೊಬ್ಬರಿ ಒಂದು ದಶಕದ ಹಿಂದೆ ಪೋಲೀಸ್ ಚೌಕಿಗಳು ಚುರಕಾಗಿದ್ದವು ನೊಂದವರು ಪೋಲೀಸ್ ಠಾಣೆಗಳಿಗಿಂತ ಹೆಚ್ವು ಪೋಲೀಸ್ ಚೌಕಿಗಳಿಗೆ ಹೋಗುವ ರೂಢಿಯನ್ನು ಬೆಳೆಸಿಕೊಂಡಿದ್ದರು ಆದರೆ ಇಂದು ಈ ಚೌಕಿಗಳು ಸಂಪೂರ್ಣವಾಗಿ ನಿರ್ಗತಿಕವಾಗಿವೆ
ಬೆಳಗಾವಿಯ ಖಡೇಬಝಾರ ಫೋರ್ಟ್ ರಸ್ತೆ ಸೇರಿದಂತೆ ನಗರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲೀಸ್ ಇಲಾಖೆ ಪೋಲೀಸ್ ಚೌಕಿಗಳನ್ಮು ತೆರೆದು ಅಪರಾಧ ಪ್ರಕರಣಗಳನ್ನು,ಆಗಾಗ್ಗೆ ನಡೆಯುತ್ತಿದ್ದ ಗಲಭೆಗಳನ್ನು ನಿಯಂತ್ರಿಸುತ್ತಿದ್ದರು ಒಂದು ಕಾಲದಲ್ಲಿ ಅತ್ಯಂತ ಕ್ರಿಯಾಶೀಲ ವಾಗಿದ್ದ ಪೋಲೀಸ್ ಚೌಕಿಗಳಿಗೆ ಕೀಲಿ ಜಡಿಯಲಾಗಿದೆ
ಬೆಳಗಾವಿ ನಗರದಲ್ಲಿ ಈಗ ಕಮಿಷ್ನರೇಟ್ ವ್ಯೆವಸ್ಥೆ ಜಾರಿಯಲ್ಲಿದೆ ನಗರದ ಈ ಪೋಲೀಸ್ ಚೌಕಿಗಳ ಬಾಗಿಲು ತೆರೆದು ಇಲ್ಲಿ ಪೋಲೀಸರು ಠಿಖಾನಿ ಹೂಡಿದರೆ ಅಪರಾಧಿಗಳಲ್ಲಿ ಭಯ ಹುಟ್ಟಿ ಅಪರಾಧ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ
ನಗರ ಪೋಲೀಸ್ ಆಯುಕ್ತ ರು ನಗರದಲ್ಲಿ ಬಾಗಿಲು ಮುಚ್ಚಿಕೊಂಡಿರುವ ಪೋಲೀಸ್ ಚೌಕಿಗಳ ಬಾಗಿಲು ತೆರೆದರೆ ನಗರದ ಕಿಡಗೇಡಿಗಳ ಮೇಲೆ,ಅಪರಾಧಿಗಳ ಮೇಲೆ ಸಮಾಜ ಘಾತುಕ ಶಕ್ತಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗುತ್ತದೆ ಜೊತೆಗೆ ಈ ಚೌಕಿಗಳ ಮೂಲಕ ವೇ ನಗರದ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ
ಬೆಳಗಾವಿ ನಗರದಲ್ಲಿ ಇನ್ನೂ ಹೆಚ್ಚಿನ ಪೋಲೀಸ್ ಠಾಣೆಗಳನ್ನು ತೆರೆಯುವ ಪ್ರಸ್ತಾವಣೆ ಇದೆ ಈ ಪ್ರಸ್ತಾವಣೆಗೆ ಮಂಜೂರಾತಿ ಸಿಗುವ ಮೊದಲು ತುರ್ತಾಗಿ ನಗರದಲ್ಲಿರುವ ಪೋಲೀಸ್ ಚೌಕಿಗಳಿಗೆ ಜೀವ ತುಂಬಿದರೆ ಕಾನೂನು ಸು ವ್ಯೆವಸ್ಥೆ ಕಾಪಾಡಲು ಸಹಾಯಕಾರಿ ಆಗಬಹುದು ಈ ಪೋಲೀಸ್ ಚೌಕಿಗಳು