ಬೆಳಗಾವಿ- ಬೆಳಗಾವಿ ನಗರದ ವಿವಿಧ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹದಿನೈದು ಕಳ್ಳತನತನದ ಪ್ರಕರಣಗಳನ್ನು ಭೇದಿಸಿ ರಿವಾಲ್ವರ ಸೇರಿದಂತೆ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸಾಮುಗ್ರಿಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ
ಬೆಳಗಾವಿ ನಗರದ ಖಡೇಬಝಾರ ಮಾಳ ಮಾರುತಿ ಎಪಿಎಂಸಿ ಸೇರಿದಂತೆ ಖಾನಾಪೂರದಲ್ಲಿ ಮನೆ ಕಳ್ಳತನ ಮಾಡಿ ಹದಿನೈದು ಸುತ್ತಿನ ರಿವಾಲ್ವರ ಚಿನ್ನಾಭರಣ ಬೆಳ್ಳಿಯ ಪಾತ್ರೆ ಹೋಂ ಥೇಟರ್ ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದ ಖದೀಮರು ಈಗ ಪೋಲೀಸರ ಅತಿಥಿಯಾಗಿದ್ದಾರೆ
ಹದಿನೈದು ಕಳ್ಳತನದ ಪ್ಕರರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬೆಳಗಾವಿ ಸಿಸಿಬಿ ಪೋಲೀಸರು ಪೋಲೀಸ್ ಧ್ವಜ ದಿನಾಚರಣೆಯ ದಿನವೇ ಭರ್ಜರಿ ಬೇಟೆಯಾಡಿ ಎಲ್ಲರ ಗಮನ ಸೆಳೆದಿದ್ದಾರೆ
ವಡಗಾವಿ ಗುರುದೇವ ಗಲ್ಲಿಯ ಪರಶರಾಮ ಈರಪ್ಪ ದಿಂಡಿಗಲ್,ಹಾವೇರಿಯ ಹಣಮಂತ ಯಲ್ಲಪ್ಪ ಕೊಂಚಿಕೊರವರ, ಅವರನ್ನು ಬಂಧಿಸಿಸಿ ೬.೫ ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಅದರಂತೆ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಮಂಧಿಸಿದಂತೆ ಕೋತ್ವಾಲ ಗಲ್ಲಿಯ ನಾಝೀಮ ಅಲ್ಲಾವದ್ದೀನ ಮುಲ್ಲಾ ಕಾಕರ ಗಲ್ಲಿಯ ಆದಿಲ್ ಜಮಾದಾರ ಎಂಬಾತರನ್ನು ಬಂಧಿಸಿ ಹತ್ತು ಲಕ್ಷ ರೂ ಮೌಲ್ಯದ ಆಛರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಮಾಹಿತಿ ನೀಡಿದ್ದಾರೆ
ಸಿಸಿಬಿ ಸಿಪಿಐ ಬಿ ಆರ್ ಗಡ್ಡೇಕರ ಅವರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ