ಅಧಿವೇಶನ ಬೆಳಗಾವಿಯಲ್ಲಿ…..ಎಲ್ಲರ ಚಿತ್ತ ದೆಹಲಿಯಲ್ಲಿ..,..!!!!
ಬೆಳಗಾವಿ- ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಮೊದಲ ಇನ್ನೀಂಗ್ಸ ಯಾವುದೇ ಗದ್ದಲ ಗಲಾಟೆ ಇಲ್ಲದೆ ಸುಗಮವಾಗಿ ನಡೆದಿದೆ ಇಂದಿನಿಂದ ಎರಡನೇಯ ಇನ್ನೀಂಗ್ಸ ಆರಂಭವಾಗಲಿದೆ
ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟದ ವಿಸ್ತರಣೆಯಾಗಲಿದೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ತಯಾರಿ ನಡೆಸಿವೆ ಆಕಾಂಕ್ಷಿಗಳು ಬೆಳಗಾವಿಯಲ್ಲಿ ಜೋರ್ ದಾರ್ ಲಾಭಿ ನಡೆಸಿದ್ದಾರೆ ಎರಡೂ ಪಕ್ಷಗಳ ನಾಯಕರು ಬೆಳಗಾವಿಯಲ್ಲಿ ಇರೋದ್ರಿಂದ ಮಂತ್ರಿ ಸ್ಥಾನ ಪಡೆಯಲು ಬೆಳಗಾವಿಯಲ್ಲೇ ಲಾಭಿ ನಡೆಯುತ್ತಿದೆ
ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಡಿಸೆಂಬರ್ 22 ರಂದು ಸಚಿವ ಸಂಪುಟ ವಿಸ್ತರಣೆ ಕುರಿತು ರಾಹುಲ್ ಗಾಂಧೀ ಜೊತೆ ಚರ್ಚಿಸಲು ದೆಹಲಿಗೆ ತೆರಳಿ ಹೊಸ ಮಂತ್ರಿಗಳ ಪಟ್ಟಿ ತಯಾರಿಸಲಿದ್ದು ಈಗ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ
ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ ಈ ಜಿಲ್ಲೆಗೆ ಇನ್ನೊಂದು ಮಂತ್ರಿ ಸ್ಥಾನ ಕೊಡಬೇಕು ಎನ್ನುವದು ಬೆಳಗಾವಿ ಜಿಲ್ಲೆಯ ಶಾಸಕರ ಬೇಡಿಕೆಯಾಗಿದೆ.
ಸಚಿವ ಸ್ಥಾನಕ್ಕಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಲಾಭಿ ಮುಂದುವರೆಸಿದ್ದಾರೆ ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟು ಲಿಂಗಾಯತ ಸಮಾಜಕ್ಕೆ ಇನ್ನೊಂದು ಮಂತ್ರಿ ಸ್ಥಾನ ಕೊಡಬೇಕು ಎನ್ನುವ ಲೆಕ್ಕಾಚಾರ ನಡೆದಿದೆ .
ಜಿಲ್ಲೆಯ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ,ಗಣೇಶ ಹುಕ್ಕೇರಿ,ಬೈಲಹೊಂಗಲದ ಮಹಾಂತೇಶ ಕೌಜಲಗಿ ಅಂಜಲಿ ನಿಂಬಾಳ್ಕರ್ ಅವರು ಮಂತ್ರಿಯಾಗಲು ತೆರೆಮರೆಯುಲ್ಲಿ ಲಾಭಿ ನಡೆಸಿದ್ದು ಇವರಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗಬಹುದು ಎನ್ನುವ ವಿಷಯ ಈಗ ಬೆಳಗಾವಿ ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದೆ
ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎನ್ನುವ ಭರವಸೆಯನ್ನು ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದಾರೆ ಆದ್ರೆ ಇನ್ನೊಂದು ಮಂತ್ರಿ ಸ್ಥಾನ ಬೆಳಗಾವಿ ಜಿಲ್ಲೆಗೆ ಸಿಗಬಹುದೇ ಎನ್ನುವದು ಈಗ ಯಕ್ಷ ಪ್ರಶ್ನೆಯಾಗಿದೆ.
ಸಿದ್ರಾಮಯ್ಯ ದೆಹಲಿಗೆ ತೆಗೆದುಕೊಂಡು ಹೋಗಲಿರುವ ಪಟ್ಟಿಯಲ್ಲಿ ತಮ್ಮ ಹೆಸರು ಬರುವಂತೆ ಮಾಡಲು ಕಾಂಗ್ರೆಸ್ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಬೆಳಗಾವಿಯಿಂದಲೇ ಬಾಣ ಬಿಡುತ್ತಿದ್ದಾರೆ
ಬೆಳಗಾವಿಯ ಜೆಡಿಎಸ್ ನಾಯಕರು ಬೆಳಗಾವಿಯ ಬುಡಾ ಸ್ಥಾನ ಪಡೆಯಲು ಪ್ರಯತ್ನ ಮುಂದುವರೆಸಿದ್ದಾರೆ ಫೈಜುಲ್ಲಾ ಮಾಡಿವಾಲೆ,ಅಶ್ಪಾಕ ಮದಕಿ,ಶಿವನಗೌಡ ಪಾಟೀಲ,ಮತ್ತು ಶ್ರೀಶೈಲ ಪಡಗಲ್ ಬುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ
ಒಟ್ಟಾರೆ ಬೆಳಗಾವಿಯ ಅಧಿವೇಶನ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಲಾಭಿ ಮಾಡಲು ಮುಖ್ಯ ವೇದಿಕೆಯಾಗಿರುವದು ಸತ್ಯ