ಬೆಳಗಾವಿ- ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಆಪರೇಶನ್ ರಾಜಕಾರಣ ಈಗ ಕ್ಲೈಮ್ಯಾಕ್ಸ ಹಂತ ತಲುಪಿದೆ ಬೆಳಗಾವಿ ಜಿಲ್ಲೆಯ ಪಾಲಿಟಿಕ್ಸ ಪವರ್ ರಾಜ್ಯ ಸರ್ಕಾರವನ್ನೇ ಬುಡಮೇಲು ಮಾಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಕಾಂಗ್ರೆಸ್ಸಿನ ಎಂಟು ಜನ ಶಾಸಕರು ಮುಂಬೈನ ಬೇರೆ ಬೇರೆ ಹೊಟೇಲ್ ಗಳಲ್ಲಿ ತಂಗಿದ್ದು ಬಿಜೆಪಿ ಒಟ್ಟು ಹದಿನಾಲ್ಕು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿ ಅವರ ಎಲ್ಲ ಷರತ್ತುಗಳಿಗೆ ಒ್ಪಿಗೆ ಸೂಚಿಸಿದ್ದು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ರೆಬೆಲ್ ನಾಯಕ ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಲೂ ಬಿಜೆಪಿ ಸಮ್ಮತಿಸಿದೆ ಎಂದು ನಂಬಲರ್ಹ ಉನ್ನತ ಮೂಲಗಳಿಂದ ತಿಳಿದು ಬಂದಿದೆ
ಇಂದು ಇಬ್ಬರು ಪಕ್ಷೇತರ ಶಾಸಕರು ದೋಸ್ತೀ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದು ಆಪರೇಶನ್ ಕಮಲಕ್ಕೆ ಅನಕೂಲವಾಗುವಂತೆ ಅನಸ್ತೇಶಿಯಾ ಕೊಟ್ಟಿದ್ದಾರೆ
ಎಂಟು ಜನ ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈನ ಬೇರೆ ಬೇರೆ ಪಂಚ ತಾರಾ ಹೊಟೇಲ್ ಗಳಲ್ಲಿ ತಂಗಿದ್ದಾರೆ ಬಿಜೆಪಿಯ ಎಲ್ಲ ಶಾಸಕರು ದೆಹಲಿಯಲ್ಲಿ ಠಿಖಾನಿ ಹೂಡಿದ್ದು ಯಾವುದೇ ಸಮಯದಲ್ಲಿ ದೋಸ್ತೀ ಸರ್ಕಾರಕ್ಕೆ ಲಕ್ವಾ ಹೊಡೆಯುವ ಸಾಧ್ಯತೆ ಇದೆ
ಮುಂಬೈಯಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರಾದ ಗೋಕಾಕಿನ 1)ರಮೇಶ ಜಾರಕಿಹೊಳಿ 2) ಆರ್ ಶಂಕರ ರಾಣೇಬೆನ್ನೂರು 3) ಹೆಚ್ ನಾಗೇಶ್ ಮುಳುಬಾಗಿಲು 4) ಮಹೇಶ ಕುಮಟೊಳ್ಳಿ ಅಥಣಿ 5) ಉಮೇಶ್ ಜಾಧವ ಚಿಂಚೊಳ್ಳಿ 6)ಬೀಮಾ ನಾಯಕ ಹರಿಬೊಮ್ಮನ ಹಳ್ಳಿ 7) ನಾಗೇಂದ್ರ ಬಳ್ಳಾರಿ 8) ಗಣೇಶ್ ಕಂಪ್ಲಿ ಶಾಸಕ ಇವರೆಲ್ಲರೂ ಈಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಂದಿನ ಆದೇಶಕ್ಕೆ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ
ಬಿಜೆಪಿ ನಾಯಕರು ಈಗ ಕಾನೂನು ತಜ್ಞರ ಜೊತೆ ಸುಧೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕೋ ? ಅಥವಾ ಸ್ಪೀಕರ್ ಇವರನ್ನು ಉಚ್ಛಾಟಿಸಿದರೆ ಯಾವ ಕ್ರಮ ಅನುಸರಿಸಬೇಕು ,ರಾಜ್ಯಪಾಲರು ಯಾವ ರೀತಿ ನಡೆದುಕೊಳ್ಳಬಹುದು ಇಂತಹ ಪರಿಸ್ಥಿತಿಯಲ್ಲಿ ಯಾವ ಯಾವ ಕಾನೂನು ತೊಡಕುಗಳು ಎದುರಾಗಬಹುದು ಎನ್ನುವ ಕುರಿತು ಬಿಜೆಪಿ ನಾಯಕರು ಕಾನೂನು ಸಲಹೆ ಪಡೆಯುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ
ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಜನೇವರಿ 23 ರ ಗಡುವು ನೀಡಿದೆ ಅಲ್ಲಿಯವರೆಗೆ ಏನು ಬೇಕೋ ಅದನ್ನು ಮಾಡಿ 23 ರರ ವರೆಗೆ ಆಪರೇಷನ್ ಯಶಸ್ವಿ ಮಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದೆ ಆಪರೇಶನ್ ಯಶಸ್ವಿ ಮಾಡಲು ಆಗದಿದ್ದರೆ ಐದು ವರ್ಷ ಸುಮ್ಮನೇ ಕುಳಿತುಕೊಳ್ಳಿ ಎಂದು ಕಟ್ಟಪ್ಪಣೆ ಹೊರಡಿಸಿದೆ ಎಂದು ತಿಳಿದು ಬಂದಿದೆ
ಬಿಜೆಪಿ ಒಟ್ಟು ಹದಿನಾಲ್ಕು ಜನ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದ್ದು ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು ದೆಹಲಿಗೆ ದೌಡಾಯಿಸಿದ್ದರೆ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಒಟ್ಟಾರೆ ಹಲವಾರು ದಿನಗಳಿಂದ ಹೊಗೆಯಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಪವರ್ ಪಾಲಿಟಿಕ್ಸ ಈಗ ಕ್ಲೈಮ್ಯಾಕ್ಸ ಹಂತ ತಲುಪಿದ್ದು ನಿಜ