ಸರ್ಕಾರ ಪತನಕ್ಕೆ ಬೆಳಗಾವಿಯಲ್ಲಿಯೇ ಮಾಸ್ಟರ್ ಪ್ಲ್ಯಾನ್ ಮಧ್ಯಾಹ್ನದ ಹೊತ್ತಿಗೆ ಹೊರಬೀಳಲಿದೆ ಶಾಕಿಂಗ್ ನ್ಯುಸ್ ?

ಬೆಳಗಾವಿ- ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಶಾಕಿಂಗ್ ನ್ಯುಸ್ ಹೊರಬೀಳಲಿದೆ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಇದಕ್ಕೆಲ್ಲಾ ಮಾಸ್ಟರ್ ಪ್ಲ್ಯಾನ್ ರೆಡಿಯಾಗಿದ್ದೇ ಬೆಳಗಾವಿ ಜಿಲ್ಲೆಯಲ್ಲಿ

ಸರ್ಕಾರ ಅಸ್ಥಿರಗೊಳಿಸಲು 23 ಜನ ಕಾಂಗ್ರೆಸ್ ಶಾಸಕರು ರೆಡಿಯಾಗಿದ್ದಾರೆ 22 ಜನ ಶಾಸಕರ ಪಟ್ಟಿಯೊಂದಿಗೆ ಮಂತ್ರಿ ರಮೇಶ ಜಾರಕಿಹೊಳಿ ಬೆಂಗಳೂರು ವಿಮಾನ ಹತ್ತಿದ್ದಾರೆ ಇಂದು ಮಧ್ಯಾಹ್ನದ ಹೊತ್ತಿಗೆ ಭಿನ್ನಮತ ಸ್ಪೋಟಗೊಂಡು ಸರ್ಕಾರ ಪತನವಾಗುವದು ಖಚಿತ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ

ಬೆಳಗಾವಿ ಜಿಲ್ಲೆಯಿಂದ ರಮೇಶ ಜಾರಕಿಹೊಳಿ,ಕುಮಟೊಳ್ಳಿ ಶ್ರೀಮಂತ ಪಾಟೀಲ ಬಿಜೆಪಿ ಸೇರ್ತಾರೆ ಆದರೆ ಸತೀಶ ಜಾರಕಿಹೊಳಿ ಅವರು ರಮೇಶ್ ಜೊತೆಗೆ ಬಿಜೆಪಿ ಸೇರುತ್ತಿಲ್ಲ ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ

ಕಾಂಗ್ರೆಸ್ ಶಾಸಕರ ನಡೆಯಿಂದ ಕಾಂಗ್ರೆಸ್ ಹೈರಾಣಾಗಿದೆ ಹೇಗಾದ್ರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಶಾತಾಯ ಗತಾಯ ಪ್ರಯತ್ನ ಮುಂದುವರೆಸಿದೆ ಇಂದು ಮದ್ಯಾಹ್ನದವರೆಗೆ ಕಾಂಗ್ರೆಸ್ ಹೈಕಮಾಂಡ ಭಿನ್ನ ಮತೀಯರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಿದೆ ಎಂದು ಹೇಳಲಾಗುತ್ತಿದೆ

ಸಚಿವ ರಮೇಶ್ ಜಾರಕಿಹೊಳಿ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ಫುಲ್ ಸಿರೀಯಸ್ ಆಗಿದ್ದಾರೆ ಎಂದು ತಿಳಿದು ಬಂದಿದ್ದು ಸತೀಶ ಜಾರಕಿಹೊಳಿ ಅವರಿಗೆ ಒಂದು ವರ್ಷ ಸಿಎಂ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ

ರಮೇಶ ಜಾರಕಿಹೊಳಿ ಬೆಂಗಳೂರಿಗೆ ತೆರಳಿದ್ದು ಶ್ರೀರಾಮಲು ಜೊತೆ ಮಾತುಕತೆ ನಡೆಸಿ ನಂತರ ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಂತರ ತಮ್ಮ ನಿರ್ಧಾ ಪ್ರಕಟಿಸುವ ಸಾಧ್ಯತೆ ಇದೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *