Breaking News

ಪಾಲಿಕೆ ಬಜೆಟ್ ನಲ್ಲಿ ಪತ್ರಕರ್ತರಿಗೂ ಅನುದಾನ ಕೊಡಿ

ಪತ್ರಕರ್ತರಿಗೆ ಆಪತ್ಕಾಲದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಪಾಲಿಕೆ ತನ್ನ 2020-21 ನೇ ಸಾಲಿನ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಒತ್ತಾಯಿಸಿ ಮಂಗಳವಾರ ಬೆಳಗಾವಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪಾಲಿಕೆ ಆಡಳಿತಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಪತ್ರಕರ್ತರು ಅವಿರತವಾಗಿ ಶ್ರಮಿಸುತ್ತ, ಸಮಾಜ ಹಾಗೂ ಆಡಳಿತ ವ್ಯವಸ್ಥೆಯನ್ನು ಸದಾ ಜಾಗೃತಗೊಳಿಸುವಲ್ಲಿ ತಮ್ಮದೇ ಕಾರ್ಯವನ್ನು ಪಕ್ಷಾತೀತವಾಗಿ ಮಾಡುತ್ತ ಬಂದಿದ್ದಾರೆ. ತಮ್ಮ ದೈನಂದಿನ ಹಲವಾರು ಒತ್ತಡಗಳ ನಡುವೆಯೂ, ಪತ್ರಿಕಾ ಧರ್ಮಕ್ಕೆ ಧಕ್ಕೆ ಬಾರದ ಹಾಗೆ ಕಾರ್ಯನಿರ್ವಹಿಸುತ್ತಿರುವುದು ತಮಗೆ ಗೊತ್ತಿರುವ ವಿಚಾರ. ಪತ್ರಕರ್ತರು ಸಮಾಜ ಹಾಗೂ ಆಡಳಿತ ವ್ಯವಸ್ಥೆಯ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಪತ್ರಕರ್ತರ ಬದುಕು ಮಾತ್ರ ಶೋಚನೀಯವಾಗಿರುವುದು ವಿಷಾದಕರವಾಗಿದೆ.
ಆದ್ದರಿಂದ ಪತ್ರಕರ್ತರ ಭವಿಷ್ಯ ಹಾಗೂ ಆಪತ್ಕಾಲೀನವಾಗಿ ಅನುಕೂಲವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿ ಇರುವಂತೆ ಪತ್ರಕರ್ತರ ನಿಧಿಗೆ ಕನಿಷ್ಠ 30 ಲಕ್ಷ ಈ ಬಾರಿಯ ಬೆಳಗಾವಿ ಮಹಾನಗರ ಪಾಲಿಕೆಯ ಮುಂಗಡ ಪತ್ರದಲ್ಲಿ ಹಣವನ್ನು ಮೀಸಲಿರಿಸುವಂತೆ ಕ್ರಮಕೈಗೊಳ್ಳಬೇಕು. ಈ ಹಣವನ್ನು ಪತ್ರಕರ್ತರು ಅಪಘಾತಕ್ಕೀಡಾದಲ್ಲಿ, ಅಕಾಲಿಕವಾಗಿ ಅಥವಾ ವಯೋ ಸಹಜವಾಗಿ ಮರಣ ಹೊಂದಿದಲ್ಲಿ ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ತುತ್ತಾದಲ್ಲಿ ಬಳಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಕೋಶ್ಯಾಧ್ಯಕ್ಷ ರಾಯಣ್ಣ. ಆರ್.ಸಿ., ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಖಜಾಂಚಿಗಳಾದ ಮಂಜುನಾಥ ಕೋಳಿಗುಡ್ಡ, ಭರಮಗೌಡ ಪಾಟೀಲ, ಸದಸ್ಯರಾದ ರಾಜಶೇಖರಯ್ಯಾ ಹಿರೇಮಠ, ಪಾರೇಶ ಬೋಸಲೆ, ಇಮಾಮ ಹುಸೇನ್ ಗೂಡನವರ, ಅಶೋಕ ಮಗದುಮ್ಮ, ಲಗಮಣ್ಣ ಸಣ್ಣಲಚ್ಚಪ್ಪಗೋಳ, ಮಾಲತೇಶ ಮಟಿಗೇರ, ಅಮೃತ ಬಿರ್ಜೆ, ಆಶಿಸ್‌ಕೃಷ್ಣ ಪೆಂಡಸೆ, ಗಜಾನನ ಮುಚ್ಚಂಡಿಕರ, ಏಕನಾಥ ಅಗಸಿಮನಿ, ಸೋಮು, ಮೈಲಾರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
———–

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *