Breaking News

ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ

ಬೆಳಗಾವಿ:ಪ್ರತಿ ಹಳ್ಳಿ ಮತ್ತು ನಗರದ ಕ್ರಿಕೇಟ್ ಪ್ರತಿಭೆಗಳಿಗೆ ಪ್ರೀಮಿಯರ್ ಮ್ಯಾಚ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೇಟ್ ಪಟುಗಳನ್ನಾಗಿ ಮಾಡುವ ಈ ಟ್ರೋಪಿಗಳ ಹಿಂದಿನ ಉದ್ದೇಶ ಮತ್ತು ಶ್ರಮ ಅಭಿನಂದನಾರ್ಹ ಎಂದು ಡಿಸಿಪಿ ಅಮರನಾಥರೆಡ್ಡಿ ತಿಳಿಸಿದರು.

ನಗರದ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಲಾಗಿರುವ ಶಂಕರ ಮುನವಳ್ಳಿ ಬೆಳಗಾವಿ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಟ್ರೋಪಿ ಅನಾವರಣಗೊಳಿಸಿ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕಾರ, ಸಂಘ ಸಂಸ್ಥೆಗಳು ಬೆಳೆಸಬೇಕಿದೆ ಎಂದರು.

ಲೀಗ್ ನ ಟೈಟಲ್ ಸ್ಪಾನ್ಸರ್ ಶಂಕರ ಮುನವಳ್ಳಿ ಮಾತನಾಡಿ ದೇಶಿ ಕ್ರೀಡೆಗಳು ಮತ್ತು ಕ್ರಿಕೇಟ್ ಆಟವನ್ನು ಉತ್ತೇಜಿಸಿ ಬೆಳೆಸಲು, ಮತ್ತು ಬಡ ಕ್ರೀಡಾಪಟುಗಳನ್ನು ಉತ್ತೇಜಿಸಿ ಬೆಳಕಿಗೆ ತರಲು ನಾನು ಸಹಾಯ ಸಹಕಾರ ನೀಡಲು  ಸದಾ ಸಿದ್ದ ಎಂದರು.

ಯುನಿಯನ್ ಜಿಮಖಾನಾ ಅಧ್ಯಕ್ಷ ಚಂದ್ರಕಾಂತ ಭಾಂಡಗಿ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಲೀಗ್ ಬಹಳ ಯಶಸ್ವಿಯಾಗಿದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಸ್ಪಾನ್ಸರ್ಸ್ ಸಹಕಾರ ಅತ್ಯುತ್ತಮವಾಗಿತ್ತು ಎಂದರು.

ಅವಿನಾಶ ಪೋತದಾರ ಮಾತನಾಡಿ ಫೆಬ್ರುವರಿ ೧೪ ಮತ್ತು ಹದಿನೈದರಂದು ಎರಡು ದಿನಗಳ ಕಾಲ ಬೆಳಗಾವಿಯ ಅಟೋ ನಗರದಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಬೆಳಗಾವಿ ಜಿಲ್ಲೆಯ ಸ್ಪೀನ್ನರ್ ಮತ್ತು ಫಾಸ್ಟ ಬಾಲರ್ ಗಳಿಗೆ ಕೋಚಿಂಗ್ ಕ್ಯಾಂಪ್ ಆಯೋಜನೆ ಮಾಡಲಾಗಿದೆ ಈ ಕ್ಯಾಂಪ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ .ರಘುರಾಮ ಭಟ್ ,ಡೆವಿಡ್ ಜಾನ್ಸನ್ ಅವರು ಎರಡು ದಿನ ಬೆಳಗಾವಿ ಬಾಲರ್ ಗಳ ವೀಕ್ಷಣೆ ಮಾಡಲಿದ್ದಾರೆ ಅವಿನಾಶ ಪೋತದಾರ ತಿಳಿಸಿದರು

ಇದೇ ಸಂಧರ್ಬದಲ್ಲಿ ಬೆಳಗಾವಿ ಪ್ರಮೀಯರ್ ಲೀಗ್ ನ ಟ್ರೋಫಿಗಳನ್ನು ಬಿಡುಗಡೆ ಮಾಡಲಾಯಿತು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *