Breaking News

ಫೆ,1 ರಿಂದ ಬೆಳಗಾವಿ ಪ್ರಿಮೀಯರ್ ಲೀಗ್

ಬೆಳಗಾವಿ- ಬೆಳಗಾವಿ ಯೂನಿಯನ್ ಜಿಮಖಾನಾ ಮೈದಾನದಲ್ಲಿ ಫೆ 1 ರಿಂದ 15 ರವರೆಗೆ ಶಂಕರ ಮುನವಳ್ಳಿ ಬೆಳಗಾವಿ ಪ್ರಿಮೀಯರ್ ಲೀಗ್ ಕ್ರಕೇಟ್ ಪಂದ್ಯಾವಳಿ ನಡೆಯಲಿದೆ

ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಯಲ್ಲಿ 7 ಪ್ರಾಯೋಜಿತ ತಂಡಗಳು ಭಾಗವಹಿಸುತ್ತವೆ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಅವರು ಪಂದ್ಯಾವಳಿ25ಯ ಮುಖ್ಯ ಪ್ರಾಯೋಜಕರಾಗಿದ್ದಾರೆ

ಪ್ರಥಮ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ 25 ಸಾವಿರ ನಗದು ಹಾಗು ಟ್ರೋಫಿ ಎರಡನೇಯ ಬಹುಮಾನ 75 ಸಾವಿರ ನಗದು ಹಾಗು ಟ್ರೋಫಿ ಮ್ಯಾನ್ ಆಫ್ ದಿ ಮ್ಯಾಚ್ ಒಂದು ಸಾವಿರ ಮ್ಯಾನ ಆಫ್ ದಿ ಸೀರೀಜ್ ಗೆ ವನಿಶಾ ಹೋಂಡಾ ವತಿಯಿಂಡ ಹೋಂಡಾ ಬೈಕ್ ನೀಡಲಾಗುತ್ತಿದೆ

ಶಂಕರ ಮುನವಳ್ಳಿ ಬೆಳಗಾವಿ ಪ್ರಿಮೀಯರ್ ಲೀಗ್ ನಲ್ಲಿ ಶಂಕರ ಮುನವಳ್ಳಿ ಪ್ಯಾಂಥರ,ಸಾಯಿರಾಜ್ ವಾರಿಯರ್ಸ,ಸಾಯಿ ಸ್ಪೋರ್ಟ್ಸತಂಡ,ಮೋಹನ ಮೋರೆ ಎಲೆವನ್,ಅಮೃತ ಪೋತದಾರ ರಾಯಲ್ಸ್. ಶ್ರೀ ಸಾಯಿ ಬಾಲಾಜಿ ತಂಡಗಳು ಭಾಗವಹಿಸಲಿವೆ

ಫೆಬ್ರುವರಿ 15 ರಂದು ಅಂತಿಮ ಪಂದ್ಯ ನಡೆಯಲಿದೆ ಉತ್ತಮ ಬಾಲರ್ ಉತ್ತಮ ಬ್ಯಾಟ್ಸಮನ್ ಸೇರಿದಂತೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ

ಅಂತಿಮ ಪಂದ್ಯಾವಳಿಯ ದಿನ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಶ್ರಮಿಸಿದ ಅವಿನಾಶ ಪೋತದಾರ ಅವರನ್ನು ಸತ್ಕರಿಸಲಾಗುವದು ಎಂದು ಯೂನಿಯನ್ ಜಿಮಖಾನಾ ಅಧ್ಯಕ್ಷ ಚಂದ್ರಕಾಂತ ಭಾಂಡಗೆ ತಿಳಿಸಿದರು

ಪತರಿಕಾಗೋಷ್ಠಿಯಲ್ಲಿ ಶಂಕರ ಮುನವಳ್ಳಿ,ಸದಾ ಕೋಲಕಾರ ಬಾಬುಲಾಲ ಬಾಗವಾನ ಮೊದಲಾದವರು ಉಪಸ್ಥಿತರಿದ್ದರು

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *