ಬೆಳಗಾವಿ- ಜೀವನದಲ್ಲಿ ಚಿಗುಪ್ಸೆಗೊಂಡ ಕ್ಯಾಂಪ್ ಪ್ರದೇಶದ 80 ವರ್ಷದ ವೃದ್ಧೆಯೊಬ್ಬಳು ಚಲಿಸುವ ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕ್ಯಾಂಪ್ ಪ್ರದೇಶದ ಅವೋಲಿಯನ್ ಅಂಥೋಣಿ ಲೂಯಿಸ್ ಎಂದು ಗುರುತಿಸಲಾಗಿದೆ ಬೆಳಿಗ್ಗೆ 9-30 ಘಂಟೆ ಸುಮಾರಿಗೆ ಬೆಳಗಾವಿಯ ಟಿಳಕವಾಡಿಯ ಫಸ್ಟ್ ಗೇಟ ಬಳಿ ರೇಲ್ವೆ ಟ್ರ್ಯಾಕ್ ಮೇಲೆ ಮಹಿಳೆಯ ಶವ ನೋಡಿ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ
ಸಾರ್ವಜನಿಕರೊಬ್ನರು ಮೃತ ಮಹಿಳೆಯನ್ನು ಗುರುತಿಸಿ ಇವರ ಮಗಳಿಗೆ ಪೋನ್ ಮೂಲಕ ಮಾಹಿತಿ ನೀಡಿದ ನಂತರ ಮಗಳು ಘಟನಾ ಸ್ಥಳಕ್ಕೆ ಆಗಮಿಸಿದ ಬಳಿಕ ವೃದ್ದೆಯನ್ನು ಗುರುತಿಸಲು ಸಾದ್ಯವಾಗಿದೆ
ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು ಅವರಿಬ್ಬರು ಹಡಿಗಿನಲ್ಲಿ ಕೆಲಸ ಮಾಡುತ್ತ ವಿದೇಶದಲ್ಲಿ ವಾಸವಾಗಿದ್ದು ಮಗಳು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತ ತಮ್ಮ ತಾತಿಯ ಜೊತೆ ವಾಸವಾಗಿದ್ದಳು
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತದ್ದಳು ಎಂದು ರೈಲ್ವೆ ಪೋಲೀಸರು ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ