ಬೆಳಗಾವಿಯ ರೆಲ್ವೆ ಮೇಲ್ಸೇತುವೆ ಕಾಮಗಾರಿ ಫುಲ್ ಫಾಸ್ಟ….!!!
ಬೆಳಗಾವಿ- ಬೆಳಗಾವಿ ರೆಲ್ವೆ ನಿಲ್ದಾಣದ ಬಳಿಯ ರೆಲ್ವೇ ಮೇಲ್ಸೇತುವೆ ಕಾಮಗಾರಿ ಫುಲ್ ಫಾಸ್ಟ ನಡೆಯುತ್ತಿದೆ
ಸಂಸದ ಸುರೇಶ ಅಂಗಡಿ ಅವರು ಸೇತುವೆ ಕಾಮಗಾರಿ ಮುಗಿಸಲು ಹಲವಾರು ಬಾರಿ ಡೆಡ್ ಲೈನ್ ಕೊಟ್ಟಿದ್ದರು ಎಲ್ಲ ಡೆಡ್ ಲೈನ್ ಗಳನ್ನು ಮೀರಿರುವ ಈ ಕಾಮಗಾರಿ ಈಗ ಮುಕ್ತಾಯದ ಹಂತ ತಲುಪುವ ಸನೀಹದಲ್ಲಿದೆ
ಸೇತುವೆ ಕಾಮಗಾರಿಯಿಂದಾಗಿ ಬೆಳಗಾವಿ ನಗರದ ಸಂಚಾರವೇ ಅಸ್ತವ್ಯೆಸ್ತವಾಗಿತ್ತು ಸೇತುವೆ ಕಾಮಗಾರಿಯಿಂದಾಗಿ ಬೆಳಗಾವಿ ನಗರದ ಅರ್ದಭಾಗ ಟ್ರಾಫಿಕ್ ಕಿರಿ ಕಿರಿ ಅನುಭವಿಸಿತ್ತು ಈಗ ಸೇತುವೆ ಕಾಮಗಾರಿ ಫುಲ್ ಫಾಸ್ಟ ನಡೆಯುತ್ತಿದೆ ಆದಷ್ಟು ಬೇಗನೆ ಕಾಮಗಾರಿ ಮುಗಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ
ಈ ಕುರಿತು ಸಂಸದ ಸುರೇಶ ಅಂಗಡಿ ಅವರನ್ನು ವಿಚಾರಿಸಿದಾಗ ನಾಳೆ ರೈಲ್ವೇ ಇಲಾಖೆಯ ಮುಖ್ಯ ಇಂಜನೀಯರ್ ಬೆಳಗಾವಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಶೀಲನೆ ಮಾಡಲಿದ್ದಾರೆ ವಾರದಲ್ಲಿ ಕಾಮಗಾರಿ ಮುಗಿಯಲಿದ್ದು ಸೇತುವೆ ಉದ್ಘಾಟನೆಗೆ ನಾಳೆಯೇ ಮಹೂರ್ತ ಫಿಕ್ಸ ಆಗಲಿದೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ