ಬೆಳಗಾವಿ – ಇಂದು ಬೆಳಗಾವಿ ಮಹಾನಗರದಲ್ಲಿ ಸುರಿದ ಭಯಂಕರ ಬಿರುಗಾಳಿ ಮಳೆಗೆ ವ್ಯಕ್ತಿಯೋರ್ವ ಬಲಿಯಾದ ಘಟನೆ ಬೆಳಗಾವಿ ಪಕ್ಕದ ನಾವಗೆ ಗ್ರಾಮದಲ್ಲಿ ನಡೆದಿದೆ.
ಇಂದು ಸುರಿದ ಮಳೆಗೆ ಬೆಳಗಾವಿ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಮರಗಳು ಉರುಳಿ ಹಲವಾರು ವಾಹನಗಳು ಜಖಂ ಗೊಂಡಿದ್ದು ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಸಮವಾಗಿ ಬೆಳಗಾವಿ ಮಹಾನಗರವನ್ನು ಕತ್ತಲಮಯವಾಗಿಸಿದ್ದು ಹಲವಾರು ಪ್ರದೇಶಗಳಲ್ಲಿ ಮನೆಗಳ ಛಾವಣಿಗಳು ಹಾರಿಹೋಗಿವೆ ಈ ಭಯಂಕರ ಮಳೆ ಓರ್ವ ವ್ಯೆಕ್ತಿಯನ್ನು ಬಲಿ ಪಡೆದುಕೊಂಡಿದೆ
ಬಿರುಗಾಳಿ ಮಳೆಗೆ ತಾಡಪತ್ರಿ ಸಮೇತ ಹಾರಿ ಬಿದ್ದು ನಾವಗೆ ಗ್ರಾಮದಲ್ಲಿ ಕೊಲ್ಹಾಪೂರ ಮೂಲದ 45ವರ್ಷದ. ರಾಜೇಂದ್ರ ಶ್ಯಾಮರಾವ ಪವಾರ್ ಎಂಬಾತ ಬಲಿಯಾಗಿದ್ದಾನೆ
ನಾವಗೆ ಗ್ರಾಮದಲ್ಲಿರುವ ಕ್ವಾಲಿಟಿ ಎನಿಮಲ್ ಪೀಡ್ಸ ಕರ್ಖಾನೆಯಿಂದ ಟ್ರಕ್ ನಲ್ಲಿ ಲೋಡ್ ಮಾಡಿದಾಗ ಜೋರಾಗಿ ಮಳೆ ಬಂದಿದೆ ಟ್ಕಕ್ ಕ್ಲೀನರ್ ಆಗಿದ್ದ ರಾಜೇಂದ್ರ ಪವಾರ್ ಪಶು ಆಹಾರಕ್ಕೆ ತಾಡಪತ್ರಿ ಮುಚ್ವಲು ಟ್ರಕ್ ಹತ್ತಿದ್ದಾನೆ ಈ ಸಂಧರ್ಬದಲ್ಲಿ ಭಯಂಕರ ಬಿರುಗಾಳಿಗೆ ತಾಡಪತ್ರಿ ಸಮೇತ ಹಾರಿ ಬಿದ್ದು ಈತ ಮೃತಪಟ್ಟಿದ್ದಾನೆ
ವಡಗಾಂವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಬೆಳಗಾವಿಯಲ್ಲಿ ಇಂದು ಸುರಿದ ಮಳೆ ಕೊಲ್ಹಾಪೂರದ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದ್ದು ದುರ್ದೈವ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ