ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಐದು ಜನ ,17 ಜಾನುವಾರುಗಳು ಮೃತಪಟ್ಟಿದ್ದು ಒಟ್ಟು 97 ಮನೆಗಳಿಗೆ ಹಾನಿಯಾಗಿದೆ
ಎಪ್ರೀಲ್ ಒಂದರಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಒಟ್ಟು 18.2 mm ಮಳೆಯಾಗಿದೆ ಮತ್ತು ನಿನ್ನೆ ರಾತ್ರಿ ಹಾಗು ಮೊನ್ನೆ ರಾತ್ರಿ 24 ತಾಸಿನಲ್ಲಿ 12.2 mm ಮಳೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ
ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು ಖಾನಾಪೂರ ತಾಲೂಕಿನಲ್ಲಿ 1 ಬೈಲಹೊಂಗಲ ತಾಲೂಕಿನಲ್ಲಿ 1 ಸವದತ್ತಿಯಲ್ಲಿ 1 ರಾಮದುರ್ಗದಲ್ಲಿ 2 ಹೀಗೆ ಒಟ್ಟು ಐದು ಜನರು ಬಲಿಯಾಗಿದ್ದಾರೆ
ಮಳೆಯ ಹೊಡೆತಕ್ಕೆ 17 ಜಾನುವಾರಗಳು ಮೃತಪಟ್ಟಿದ್ದು ಗೋಕಾಕ ತಾಲೂಕಿನಲ್ಲಿ 2 ಸವದತ್ತಿಯಲ್ಲಿ 1 ಕಿತ್ತೂರ1 ಖಾನಾಪೂರ ತಾಲೂಕಿನಲ್ಲಿ 13 ಹೀಗೆ ತಾಲೂಕಿನಲ್ಲಿ ಒಟ್ಟು 17 ಜಾನುವಾರಗಳು ಮೃತಪಟ್ಟಿವೆ
ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ 97 ಮನೆಗಳಿಗೆ ಹಾನಿಯಾಗಿದ್ದು ಖಾನಾಪೂರ ತಾಲೂಕಿನಲ್ಲಿ 6 ಬೈಲಹೊಂಗಲ ತಾಲೂಕಿನಲ್ಲಿ 75 ಕಿತ್ತೂರ ತಾಲ್ಲೂಕಿನಲ್ಲಿ 2 ಸವದತ್ತಿ ತಾಲ್ಲೂಕಿನಲ್ಲಿ 12 ಗೋಕಾಕ್ ತಾಲ್ಲೂಕಿನಲ್ಲಿ ಎರಡು ಹೀಗೆ ಜಿಲ್ಲೆಯ 97 ಮನೆಗಳಿಗೆ ಹಾನಿಯಾಗಿದೆ
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು ಅಲ್ಲಲ್ಲಿ ಮರಗಳು ಮತ್ತು ವಿದ್ಯುತ್ತ ಕಂಬಗಳು ನೆಲಕ್ಕುರುಳಿವೆ
ರಕ್ಕಸಕೊಪ್ಪ ಜಲಾಶಯ ಪ್ರದೇಶದಲ್ಲಿ ಮಳೆಸುರಿದಿದ್ದು ಒಳ ಹರಿವು ಆರಂಭವಾಗಿದೆ ಈ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕಿಂತಲೂ ಮೂರು ಅಡಿ ಹೆಚ್ಚಿದೆ ಇನ್ನು ಮುಂದೆ ಮಳೆ ಸುರಿದರೆ ಒಳ ಹರಿವು ಹೆಚ್ಚಾಗಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲಿದೆ ಎಂದು ಪ್ರಸನ್ನಮೂರ್ತಿ ತಿಳಿಸಿದ್ದಾರೆ
ಬರಗಾಲ ಬವಣೆಯಿಂದ ಬಳಲುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಜಿಲ್ಲೆಯ ನದಿಗಳ ಹೊಂಡಗಳಲ್ಕಿ ನೀರು ನಿಂತುಕೊಂಡಿದೆ ಮಳೆ ರೈತರ ಮೊಗದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ