ಬೆಳಗಾವಿ- ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜನ ಜೀವನ ಅಸ್ತವ್ಯೆಸ್ಥ ವಾಗಿದ್ದು ನೂರಾರು ಗಿಡಮರಗಳು ನೆಲಕ್ಕುರಿಳಿವೆ ಹಲವಡೆ ಮನೆಗಳು ಕುಸಿದಿವೆ
ಮಲಪ್ರಭಾ ಉಗಮಸ್ಥಾನದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ
ಕಣಕುಂಬಿಯ ಕಳಸಾ ಕಾಮಗಾರಿ ಸ್ಥಳದಲ್ಲಿ ಭೂ ಕುಸಿತವಾದ ಪರಿಣಾಮ
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ. ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಕೊಚ್ಚಿಹೋಗಿದೆ
ಕಣಕುಂಬಿ-ಚಿಗಳೆ,ಕಣಕುಂಬಿ-ಹಂದಿಗೊಪ್ಪ ನಡುವಿನ ರಸ್ತೆ ಸಂಚಾರ ಸ್ಥಗಿತವಾಗಿದೆ
ಪ್ರವಾಹದಲ್ಲಿ ಟ್ರ್ಯಾಕ್ಸ್ ವಾಹನ ಕೊಚ್ಚಿಹೋಗಿದೆ
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಹಿನ್ನೆಲೆ. ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ
ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ 2 ಅಡಿ ನೀರು. ಜಲಾಶಯದ ಗರಿಷ್ಠ ಮಟ್ಟ 2476.50 ಅಡಿ. ಇಂದಿನ ಮಟ್ಟ 2464 ಅಡಿ.ಆಗಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಏರುತ್ತಿದೆ