ಬೆಳಗಾವಿಯಲ್ಲಿ,35 ಕ್ಕೂ ಹೆಚ್ವು ಮನೆಗಳು ಕುಸಿತ,17 ಸೇತುವೆಗಳು ಜಲಾವೃತ,ಇಬ್ಬರ ಸಾವು….
ಬೆಳಗಾವಿ-ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ತತ್ತರಿಸಿದೆ.ಮೂರೇ ದಿನಗಳ ಅವಧಿಯಲ್ಲಿ 35 ಕ್ಕೂ ಅಧಿಕ ಮನೆಗಳ ಕುಸಿದು ಬಿದ್ದಿವೆ,17 ಸೇತುವೆಗಳು ಮುಳುಗಡೆಯಾಗಿದ್ದು ಇಬ್ಬರು ಬಲಿಯಾಗಿದ್ದಾರೆ.
ಮಳೆಯಿಂದ ಕೃಷ್ಣ, ಘಟಪ್ರಭಾ ಭೋರ್ಗರೆತ 17 ಕ್ಕೂ ಅಧಿಕ ಸೇತುವೆಗಳ ಜಲಾವೃತಗೊಂಡಿವೆ.ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಬೆಳಗಾವಿಯಲ್ಲಿ 16 ಮನೆಗಳ ಕುಸಿದು ಬಿದ್ದಿವೆ.ನಿಪ್ಪಾಣಿ ತಾಲೂಕೊಂದರಲ್ಲೇ ಮಳೆಯಿಂದ 19 ಮನೆಗಳು ಕುಸಿದು ಬಿದ್ದಿವೆ.10 ದಿನಗಳ ಹಿಂದೆಯೇ ಘಟಪ್ರಭ, ಮಲಪ್ರಭ ಜಲಾಶಯಗಖು ಭರ್ತಿಯಾಗಿದ್ದು2294 ಕ್ಯುಸೆಕ್ ಮಲಪ್ರಭ ನದಿಯ ಒಳಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಹಿಡಕಲ್ ಜಲಾಶಯದಿಂದ 17 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.ಘಟಪ್ರಭಾ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿಯ ಕೃಷ್ಣ ನದಿಯ ಒಳಹರಿವು 33,409 ಆಗಿದೆ.
ನದಿಗಳ ಒಳಹರಿವು ಹೆಚ್ಚಳ ಕಾರಣಕ್ಕೆ 17ಕ್ಕೂ ಅಧಿಕ ಸೇತುವೆ ಜಲಾವೃತಗೊಂಡಿವೆ.
ಗೋಕಾಕ-ಶಿಂಗಳಾಪುರ, ಹುಕ್ಕೇರಿ-ಯರನಾಳ, ಕುರಣಿ-ಕೋಚರಿ, ಕುನ್ನೂರ-ಬೋರವಾಡ, ಅಕ್ಕೋಳ-ಸಿದ್ನಾಳ ಸೇತುವೆ ಮುಳುಗಡೆಯಾಗಿವೆ.ಕುನ್ನೂರ-ಬೋಜವಾಡ, ಕುನ್ನೂರ-ಬೋರಬಾಡ, ಭಿವಶಿ-ಜತ್ರಾಟ ಸೇತುವೆ ಜಲಾವೃತಗೊಂಡಿವೆ.
ಇಂದು ಬೆಳಗ್ಗೆಯೂ ಜಿಲ್ಲೆಯಲ್ಲಿ ಮಳೆಯ ಅರ್ಭಟ ಮುಂದುವರೆದಿದ್ದು,ಅಲ್ಲಲ್ಲಿ ಮನೆಗಳು ಕುಸಿದು ಬೀಳುತ್ತಲೇ ಇವೆ.ಜನಜೀವನ ಅಸ್ತವ್ಯಸ್ತವಾಗಿದೆ.