ಬೆಳಗಾವಿ:
ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿವೆ.
ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಮಾರ್ಕಂಡೇಯ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಜಿಲ್ಲೆಯ ಮಲಪ್ರಬಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಇರುವ ಕಾರಣ ಕೃಷ್ಣಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭರ್ತಿಯಾಗುವ ಹೊಸ್ತಿಲಲ್ಲಿದೆ. ಮಹಾರಾಷ್ಟ್ರ ಯಾವುದೇ ಸಮಯದಲ್ಲಿ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇದೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ಬೆಳಗಾವಿ ಸುತ್ತಲು ಇರುವ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಎಲ್ಲ ನದಿಗಳ ತೀರಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶೇ. 90 ರಷ್ಟು ಬಿತ್ತನೆಯಾಗಿ ಬೆಳೆದು ನಿಂತಿರುವ ಹುರುಳಿ ಸೇರಿದಂತೆ ಇತರ ದ್ವಿ ಧಾನ್ಯ ಬೆಳೆಗಳು ಮಳೆಗೆ ಆಹುತಿಯಾಗುವ ಆತಂಕ ಆವರಿಸಿದೆ.
ಬೆಳಗಾವಿ ನಗರ ನಿವಾಸಿಗಳಿಗೆ ವರ್ಷವಿಡೀ ನೀರು ಪೂರೈಸುವ ಜಲ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಲು ಕೇವಲ ಎರಡು ಅಡಿ ಮಾತ್ರ ಬಾಕಿ ಇದೆ. ಇದೇ ರೀತಿ ಮಳೆ ಮುಂದುವರಿದರೆ 24 ಗಂಟೆಗಳಲ್ಲಿ ಜಲಾಶಯ ಭರ್ತಿಯಾಗುವುದು ಗ್ಯಾರಂಟಿ.
Check Also
ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ
ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …