ಬೆಳಗಾವಿ: ನಗರದ ದರ್ಬಾರ
ಗಲ್ಲಿಯಲ್ಲಿ ಶಾಸಕ ಫಿರೋಜ್ ಸೇಠ ಅವರು ಪವಿತ್ರ ರಮಜಾನ್ ಹಬ್ಬದ ನಿಮಿತ್ಯ
ಇಫ್ತಿಯಾರ ಕೂಟವನ್ನು ಆಯೋಜಿಸಿದ್ದರು.
ಜಿಲ್ಲಾಧಿಕಾರಿ
ಎನ್.ಜಯರಾಂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ದೂರ ದೂರದ ಗ್ರಾಮಗಳಿಂದ ರಮಜಾನ್ ಹಬ್ಬದ ಖರೀದಿಗಾಗಿ ಬೆಳಗಾವಿ ಮಾರುಕಟ್ಟಿಗೆ ಬಂದಿದ್ದ ಸಾವಿರಾರು ಜನರಿಗೆ ಖಡೇಬಜಾರನಲ್ಲಿ ಇಫ್ತಿಯಾರ ವ್ಯವಸ್ಥೆ ಮಾಡಲಾಗಿತ್ತು.
ಇಫ್ತಿಯಾರ ಕೂಟದ ಮೊದಲು ಜಿಲ್ಲಾಧಿಕಾರಿ ಎನ್.ಜಯರಾಂ ಶಾಸಕ ಫಿರೋಜ್ ಸೇಠ, ರಾಜು ಸೇಠ, ನಗರ ಸೇವಕರಾದ ಜಯಶ್ರೀ ಮಾಳಗಿ, ಶಾಂತಾ ಉಪ್ಪಾರ, ಫಯೀಮ್ ನಾಯಿಕವಾಡಿ ಸೇರಿದಂತೆ ಹಲವಾರು ಜನ ಗಣ್ಯರು ದರಬಾರಗಲ್ಲಿ ಮತ್ತು ಖಡೇಬಜಾರನಲ್ಲಿ ಸಂಚರಿಸಿ ರಮಜಾನ್ ಹಬ್ಬದ ದರ್ಬಾರವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಜಯರಾಂ, ಬೆಳಗಾವಿ ನಗರದಲ್ಲಿ ವಿಶಿಷ್ಟವಾಗಿ ರಮಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ನಿಮಿತ್ಯ ಬೆಳಗಾವಿಯ ದರ್ಬಾರಗಲಿಯಲ್ಲಿ ನಡೆಯುವ ಹಬ್ಬದ ವೈಭವವನ್ನು ನೋಡಲು ದೂರ ದೂರದ ನಗರಗಳಿಂದ, ಹೋರ ರಾಜ್ಯಗಳಿಂದ ಜನ ಬೆಳಗಾವಿಗೆ ಬರುತ್ತಾರೆ. ಎಲ್ಲಾ ಧರ್ಮಿಯರು ಹಬ್ಬದ ವೈಭವಕ್ಕೆ ಸಾಕ್ಷಿಯಾಗುತ್ತಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದು, ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ನಡೆಯುವ ಪ್ರಾರ್ಥನೆಯಲ್ಲಿ ಮಳೆ ಮತ್ತು ಮತ್ತು ಬೆಳೆಗಾಗಿ ಪ್ರಾರ್ಥನೆ ನಡೆಯಲಿ ಎಂದು ಹೇಳಿದರು.
ಶಾಸಕ ಫಿರೋಜ್ ಸೇಠ ಮಾತನಾಡಿ, ಬೆಳಗಾವಿಯಲ್ಲಿ ಎಲ್ಲಾ ಉತ್ಸವಗಳನ್ನು ಎಲ್ಲ ಧರ್ಮಿಯರು ಸೇರಿ ಆಚರಿಸುವದು ಇಲ್ಲಿಯ ಪರಂಪರೆ. ಪ್ರತಿ ವರ್ಷವೂ ರಮಜಾನ್ ಹಬ್ಬದ ವೈಭವ ಹೆಚ್ಚಾಗುತ್ತಿದೆ. ಕಳೆದ ಬಾರಿಗಿಂತಲೂ ಈ ವರ್ಷ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕೇವಲ ಮುಸ್ಲೀಮರಲ್ಲದೆ ಅನ್ಯ ಧರ್ಮಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವದು ತಮಗೆ ಸಂತಸ ತಂದಿದೆ ಎಂದ ಅವರು ಸರ್ವರಿಗೂ ಶೂಭ ಕೋರಿದರು.