ಬೆಳಗಾವಿ- ಒಂದೂವರೆ ದಶಕಗಳ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಗುಜರಾತ್ ತಂಡ ಮೊದಲ ದಿನ ಬೃಹತ್ ಮೊತ್ತದ ರನ್ ದಾಖಲಿಸುವ ಮೂಲಕ ಕುಂದಾನಗರಿ ಕ್ರಿಕೆಟ್ ಪ್ರೇಮಿಗಳ ದಶಕಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಕೆಎಸ್‍ಸಿಎ ಮೈದಾನದಲ್ಲಿ ಮಂಗಳವಾರ ನಡೆದ ಪಂಜಾಬ್ ಎದುರಿನ ರಣಜಿ ಪಂದ್ಯದಲ್ಲಿ ಗುಜರಾತ್ ತಂಡ ಮೊದಲ ದಿನದ ಅಂತ್ಯಕ್ಕೆ ಎರಡು ವಿಕೆಟ್‍ಗೆ 281 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‍ಮನ್ ಪ್ರಿಯಾಂಕ ಪಾಂಚಾಲ್ ಶತಕ (134* ರನ್) ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಹೆಚ್ಚಿಸಿದರು. 12 ಬೌಂಡರಿ ಬಾರಿಸಿದ ಅವರು ಔಟಾಗದೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡ 27 ರನ್ ಗಳಿಸುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್‍ಮನ್ ಸುಮೀತ್ ಗೋಯೆಲ್ (16) ವಿಕೆಟ್ ಕಳೆದುಕೊಂಡಿತು. ನಂತರ ಜತೆಯಾದ ಪ್ರಿಯಾಂಕ ಪಾಂಚಾಲ್ ಮತ್ತು ಭಾರ್ಗವ ಮೇರೈ (65 ರನ್) 143 ರನ್‍ಗಳ ಜೊತೆಯಾಟ ನೀಡಿದರು. ತಂಡದ ಸ್ಕೋರ್ 170 ಆಗಿದ್ದಾಗ ಭಾರ್ಗವ ಅವರು ಎಲ್‍ಬಿಡಬ್ಲುಗೆ ಬಲಿಯಾದರು. ನಂತರ ಬಂದ ಆರ್.ಎಚ್. ಭಟ್ (55* ರನ್) ಅರ್ಧ ಶತಕ ಸಿಡಿಸಿ ಗಮನಸೆಳೆದರು. ಪಂಜಾಬ ತಂಡದ ಪರ ಮನ್‍ಪ್ರೀತ್ ಗೋನಿ ಮತ್ತು ಸಂದೀಪ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
Check Also
ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..
ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …