Breaking News

ಮರಾಠಿ ನೆಲದಿಂದ ಹೊರಹೊಮ್ಮಿದ ಜೈ ಕರ್ನಾಟಕ..!

ಬೆಳಗಾವಿ: ನಗರ ನಿವಾಸಿಗಳ ಸ್ವಾತಂತ್ರ್ಯ ಪೂರ್ವ ಕನಸು ಈಗ ನನಸಾಗಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈಯಿಂದ ವಿಡಿಯೋ ಲಿಂಕ್ ಮೂಲಕ ಜಯ ಕರ್ನಾಟಕ ಎಂಬ ಘೋಷಣೆಯೊಂದಿಗೆ ರೈಲು ಸಚಿವ ಸುರೇಶ ಪ್ರಭು ಬೆಳಗಾವಿ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಿರ್ಮಾಣಗೊಂಡ ರೈಲ್ವೆ ಮೇಲ್ಸೇತುವೆ ಯನ್ನು ಲೋಕಾರ್ಪಣೆ ಮಾಡಿದರು.

ಸಂಸದ ಸುರೇಶ ಅಂಗಡಿಯವರ ಕನಸಿನ ಕೂಸಾದ ಪ್ರಥಮ ರೈಲ್ವೆ ಮೇಲ್ಸೆತುವೆ ರಾಜಕೀಯ ದೇವರು ಅಟಲ್ ಬಿಹಾರಿ ವಾಜಪೇಯಿ ಅವರ ದಿನ ಲೋಕಾರ್ಪಣೆಗೊಂಡಿರುವುದು ವಿಶೇಷವಾಗಿದೆ.

ವಿಡಯೋ ಲಿಂಕ್ ಮೂಲಕ ಸೇತುವೆ ಉದ್ಘಾಟಿಸಿ ಆನ್ ಲೈನ್ ಭಾಷಣ ಮಾಡಿದ ರೈಲು ಸಚಿವ ಸುರೇಶ ಪ್ರಭು, ಬೆಳಗಾವಿಯ ನೆಲ ಐತಿಹಾಸಿಕ ಹಾಗೂ ಪ್ರೇರಣೆದಾಯಕ ನೆಲವಾಗಿದೆ. ಬೆಳಗಾವಿಗೂ ಮತ್ತು ನನಗೂ ಹಲವು ದಶಕಗಳ ನಂಟಿದೆ. ಈ ಬೆಳಗಾವಿ ನಗರ ಹಲವಾರಿ ವಿಶೇಷತೆಗಳನ್ನು ಹೊಂದಿದೆ‌. ಇಲ್ಲಿಯ ರೈಲ್ವೆ ಮೇಲ್ಸೆತುವೆಯನ್ನು ಉದ್ಘಾಟಿಸಿದ್ದು ನನ್ನ ಭಾಗ್ಯವಾಗಿದೆ ಎಂದು ಹೇಳಿದರು.

ಬೆಳಗಾವಿಯ ಕುಂದಾ ನನಗಿಷ್ಟ. ಇಲ್ಲಿಯ ಹಲವು‌ ಜನ ನಾಯಕರು ನನ್ನ ಸ್ನೇಹಿತರಾಗಿದ್ದಾರೆ. ಭಾಷೆ ಯಾವ ರೀತಿ ಎರಡು ಸಂಸ್ಕೃತಿ ಗಳನ್ನು ಕೂಡಿಸುತ್ತದೆಯೋ ಅದೇರೀತಿ ಈ ಸೇತುವೆ ಎರಡೂ ಪ್ರದೇಶಗಳ‌ ಜನರನ್ಜು ಒಂದುೂಡಿಸುವ ಸಂಪರ್ಕ ಕೊಂಡಿಯಾಗಲಿದೆ  ಎಂದರು.

ಸಂಸದ ಸುರೇಶ ಅಂಗಡಿಯವರ ವಿಶೇಷದಿಂದಾಗಿ  ಈ ಸೇತುವೆ ನಿರ್ಮಾಣವಾಗಿದೆ. ಮತ್ತೊಂದು ಸೇತುವೆ ನಿರ್ಮಾಣದ ಶಂಕುಸ್ಥಾಪನೆಯೂ ಇದೇ ದಿನ ನೆರವೇರಿದೆ. ರಾಜ್ಯ ಸರ್ಕಾರ ಸಹಯೋಗದೊಂದಿಗೆ ಕರ್ನಾಟಕ ರೈಲು ವ್ಯವಸ್ಥೆಯನ್ನು ಸುಧಾರಿಸುವುದು ನಮ್ಮ ಸಂಕಲ್ಪವಾಗಿದೆ. ಕರ್ನಾಟಕದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಮರಾಠಿಯಲ್ಲೇ ಭಾಷಣ ಮಾಡಿದ ಅವರು, ತಮ್ಮ ಮಾತಿನ ಕೊನೆಯಲ್ಲಿ ಜಯ ಕರ್ನಾಟಕ ಎಂದು ಸಂಬೋಧಿಸಿದ್ದು ಅಚ್ಚರಿಗೆ ಕಾರಣವಾಯಿತು.

ಸಂಸದ ಸುರೇಶ ಅಂಗಡಿ ಮಾತನಾಡಿ, ರೈಲ್ವೆ ಇಲಾಖೆ, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ಶ್ರಮ ಹಾಗೂ ಸ್ಥಳೀಯರ ಸಹಕಾರದಿಂದಾಗಿ ಪ್ರಥಮ ಮೇಲ್ಸೆತುವೆ ಲೋಕಾರ್ಪಣೆಗೊಂಡಿದೆ. ಹಳೇ ಪಿ.ಬಿ.ರಸ್ತೆಯ ಮೇಲ್ಸೆತುವೆ ನಿರ್ಮಾಣಕ್ಕೂ ಇಂದು ಶಿಲಾನ್ಯಾಸ ನೆರವೇರಿಸಲಾಗಿದ್ದು, ಮಾರ್ಚ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ನೀಡಿದ ಅವರು, 2018ರ ಒಳಗಾಗಿ‌ ನಗರದ ಎಲ್ಲ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಶಾಸಕ ಸಂಭಾಜಿ ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನಡವರ ಹಿತದಲ್ಲಿ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಯ ಹಾದಿ ಹಿಡಿದಿದೆ. ಬೆಳಗಾವಿ ನಗರ ಎಷ್ಟು ಬೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. ತಾವು ಮೇಯರ್ ಇದ್ದಾಗ ಹಿಡಕಲ್ ಜಲಾಶಯದಿಂದ ನೀರು ಹರಿಸಿದ ಪರಿಣಾಮ ಇಂದು ನಗರದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದರು.

ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಮೇಯರ್ ಸರೀತಾ ಪಾಟೀಲ, ಉಪ ಮೇಯರ್ ಸಂಜಯ ಶಿಂಧೆ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ, ಪಾಲಿಕೆ ಸದಸ್ಯರು ಹಾಗೂ ಸಾವಿರಾರು ಜನ ಇದ್ದರು.

ಲೇಟ್ ಲತೀಫಾ

ಮೇಯರ್ ಸರೀತಾ ಪಾಟೀಲ ಅವರು ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಗೆ ಆಗಮಿಸಿದರು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನೂ ಈ ಕಡೆ ಸುಳಿಯಲಿಲ್ಲ

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *