ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿ
ಬೆಳಗಾವಿ-ವೀರ ಸಂಗೊಳ್ಳಿ ರಾಯಣ್ಣನ ಕ್ರಾಂತಿಕಾರಿ ಹೋರಾಟ,ಮತ್ತು ಅವರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು,ಕ್ರಾಂತಿ ಪುರುಷನ ಪ್ರತಿಮೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಷ್ಠಾಪನೆ ಮಾಡಬೇಕೆಂದು ಬಿಜೆಪಿ ವಿಧಾನ ಪರಿಷತ್ತ ಸದಸ್ಯ ಹೆಚ್ ವಿಶ್ವನಾಥ ಒತ್ತಾಯಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ,ವೀರ,ಶೂರ ಅವರ ತ್ಯಾಗ ಮತ್ತು ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕಿದೆ,ರಾಯಣ್ಣನ ಹಾಗೆ ಟಿಪ್ಪು ಸುಲ್ತಾನ್ ಕೂಡಾ ಈ ನೆಲದ ಮಗ ,ಅವರ ಇತಿಹಾಸವನ್ನು ಎಲ್ಲರೂ ಓದಬೇಕು ಪಠ್ಯದಿಂದ ಟಿಪ್ಪು ಇತಿಹಾಸವನ್ನು ತೆಗೆದು ಹಾಕಿಲ್ಲ,ಎಂದು ಬಿಜೆಪಿಯ ವಿಧಾನ ಪರಿಷತ್ತ ಸದಸ್ಯ ಹೆಚ್ ವಿಶ್ವನಾಥ ಅವರು ಟಿಪ್ಪು ಸುಲ್ತಾನ್ ಅವರನ್ನು ಹೊಗಳುವ ಮೂಲಕ ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿ ಪಕ್ಕದ ಪೀರನವಾಡಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ರಾಜ್ಯವ್ಯಾಪಿ ಹೋರಾಟ ನಡೆಯುತ್ತಿದೆ ಆದ್ರೆ ಹೆಚ್ ವಿಶ್ವನಾಥ ಅವರು ರಾಯಣ್ಣನ ಮೂರ್ತಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಷ್ಠಾಪನೆ ಮಾಡಬೆಕೆಂದು ಒತ್ತಾಯ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಶನಿವಾರ ದಿನಾಂಕ 29 ರಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬೆಳಗಾವಿಗೆ ಭೇಟಿ ನೀಡಿ ಅಂದು ಪೀರನವಾಡಿಯ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಒಟ್ಟಾರೆ ಪೀರನವಾಡಿಯ ರಾಯಣ್ಣನ ಮೂರ್ತಿ ವಿವಾದ ಈಗ ರಾಜ್ಯದಾದ್ತ ಸದ್ದು ಮಾಡುತ್ತಿದೆ.