ಬೆಳಗಾವಿ- ನಗರದ ರಸ್ತೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಸುರಿದರೂ ರಸ್ತೆ ಮೇಲೆ ಬಿದ್ದಿರುವ ತಗ್ಗುಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ
ಮಹಾನಗರ ಪಾಲಿಕೆ ನಗರದ ರಸ್ತೆಗಳಿಗೆ ಕೋಟ್ಯಾಂತರ ರೂ ಅನುದಾನ ಖರ್ಚು ಮಾಡಿ ರಿಪೇರಿ ಮಾಡುತ್ತಿದೆ ಒಂದು ಕಡೆ ಹೆಸ್ಕಾಂ ಇನ್ನೊಂದು ಕಡೆ ಖಾಸಗಿ ಕಂಪನಿಗಳು ನಗರದ ರಸ್ತೆಗಳನ್ನ ಅಗೆದು ಅಗೆದು ಕೇಬಲ್ ಹಾಕಿ ನಗರದ ರಸ್ತೆಗಳನ್ನು ಹಾಳು ಮಾಡುತ್ತಿರುವದು ದೊಡ್ಡ ದುರಂತ
ನಗರದ ಆರ್ ಟಿ ಓ ವೃತ್ತದ ಬಳಿ ರಸ್ತೆಗಳ ಮೇಲೆ ಗುಂಡಿಗಳಿವೆಯೋ ಅಥವಾ ಗುಂಡಿಗಳ ನಡುವೆ ರಸ್ತೆ ಹಾದು ಹೋಗಿದೆಯೋ ಅನ್ನೋದು ತಿಳಿಯುವುದಿಲ್ಲ
ನಗರದ ಚನ್ನಮ್ಮ ವೃತ್ತ ದಲ್ಲಿ ಆಸ್ಪತ್ರೆ ಪಕ್ಜದ ಸರ್ವೀಸ್ ರಸ್ತೆಯಲ್ಲಿ ದೊಡ್ಡ ತಗ್ಗು ಬಿದ್ದಿವೆ ಈ ತಗ್ಗಿನಲ್ಲಿ ಅದೆಷ್ಟೋ ಜನ ಬೈಕ್ ತಗೋಂಡು ಬಿದ್ದು ಎದ್ದಿರುವದು ಲೆಕ್ಕವಿಲ್ಲ
ಅಂಬೇಡ್ಕರ್ ರಸ್ತೆ ಹೈಟೆಕ್ ಮತ್ತು ಸ್ಮಾರ್ಟ್ ಆಗುತ್ತಿದೆ ಈ ರಸ್ತೆಯ ಪಥಲೂನ್ಸ ಶೋರೂಮ್ ಎದುರಿಗೆ ಆಝಂ ನಗರ ಕ್ರಾಸ್ ಹತ್ತಿರ ದೊಡ್ಡ ತೆಗ್ಗು ಬಿದ್ದಿದೆ
ಜೊತೆಗೆ ನಗರದ ರೆಲ್ವೆ ಓವರ್ ಬ್ರೀಡ್ಜ ಹತ್ತಿರ ವಿರುವ ಮರಾಠಾ ಮಂಡಳ ಭವನ ಎದುರಿನ ಕೆ ಹೆಚ್ ಬಿ ಅಪಾರ್ಟಮೆಂಟ್ ಗೆ ಹೋಗುವ ದಾರಿಯಲ್ಲಿ ಸಾಲು ಸಾಲು ರಸ್ತೆ ಗುಂಡಿಗಳಿದ್ದು ಮಹಾನಗರ ಪಾಲಿಕೆಯ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ವಿ ಬೆಳಗಾವಿಯ ಗೌರವ ಕಾಪಾಡಲಿ