Breaking News

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ

  • 17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ
  • ಬೆಳಗಾವಿ:  123ನೇ ವಷಾ೯ಚರಣೆ ನಿಮಿತ್ತ ಬೆಳಗಾವಿ ರೋಟರಿ ಕ್ಲಬ್ ಫೆ.೧೭ ರಿಂದ ೨೩ರ ವರೆಗೆ ರೋಟರಿ ಸಪ್ತಾಹ ಆಚರಿಸುತ್ತಿದ್ದು, ಏಳು ದಿನಗಳ ವರೆಗೆ ಶಿಕ್ಷಕರಿಗಾಗಿ ಕಂಪ್ಯೂಟರ್ ಸಾಕ್ಷರತೆ, ವಿದ್ಯಾಥಿ೯ಗಳ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ನ ಕಾಯ೯ಕ್ರಮ ರೂವಾರಿ ಮುಕುಂದ ಭಂಗ್ ಹೇಳಿದರು.
  • ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೧೭ ರಂದು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ ೧೪ರಲ್ಲಿ ಶಿಕ್ಷಕರಿಗಾಗಿ ಕಂಪ್ಯೂಟರ್ ಸಾಕ್ಷರತೆ ಕಾಯ೯ಕ್ರಮ ಆಯೋಜಿಸಲಾಗಿದೆ. ೧೮ ರಂದು ಸ್ವಿಮ್ ಮ್ಯಾರಥಾನ್ ಹಿಂದ್ ಸೊಷಿಯಲ್ ಕ್ಲಬ್ ನಲ್ಲಿ ನಡೆಯಲಿದ್ದು, ೧೨೩ ಈಜು ಪಟುಗಳು ರಿಲೇ ಮಾದರಿಯಲ್ಲಿ ೧೧೦ ಕಿಮೀ ಈಜಲಿದ್ದಾರೆ. ದಿ. ೨೦ರಂದು ಖಾಸಬಾಗದ ಭಾರತಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕೈಗಳ ಶುಚಿತ್ವದ ಕುರಿತು ಕಾಯ೯ಕ್ರಮ ನಡೆಯಲಿದೆ ಎಂದರು.
    ದಿ. ೩೧ ರಂದು ಟಿಳಕವಾಡಿಯ ಹೈಸ್ಕೂಲಿನಲ್ಲಿ ಸುಮಾರು ೩೦೦ ವಿದ್ಯಾಥಿ೯ಗಳ ಕಿವಿ, ಗಂಟಲು ಹಾಗೂ ಮುಗು ತಪಾಸಣೆ ನಡೆಸಲಾಗುವುದು. ಡಾ.ಸತೀಶ ಬಾಗೇವಾಡಿ ಮತ್ತು ಡಾ. ಸೂರಜ ಜೋಶಿ ವಿದ್ಯಾರ್ಥಿಗಳ ತಪಾಸಣೆ ಮಾಡಲಿದ್ದಾರೆ. ದಿ. ೨೩ ರಂದು ರೋಟರಿ ಈಜುಕೋಳದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ವೀರದವಳ ಉಪಾದ್ಯ, ರಮೇಶ ರಾಮಗುರವಾಡೆ ಸೇರಿದಂತೆ ಮೊದಲಾದವರು ಇದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *